P.V.Hegde Add

ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಲಭ್ಯ

ಮೈಸೂರು ಅರಮನೆ ಪ್ರವೇಶಕ್ಕೆ ಶುಲ್ಕ ಎಷ್ಟು ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಾಡಹಬ್ಬ ಮೈಸೂರು ದಸರಾಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಶತಮಾನಗಳ ಇತಿಹಾಸ ಹೊಂದಿರುವ, ಮೈಸೂರು ರಾಜ ಮಹಾರಾಜರು ಬಳಸುತ್ತಿದ್ದ ವೈಭವೋಪೇತ, ರತ್ನಖಚಿತ ಸಿಂಹಾಸನವನ್ನು ನೋಡಲು ಇದೀಗ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ, ಜಂಬೂ ಸವಾರಿ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಮಾತ್ರ ಸೀಮಿತವಾಗಿರಲಿದೆ. ದಸರಾ ಮಹೋತ್ಸವ ಕೂಡ ತುಂಬಾ ಸರಳವಾಗಿ ಆಚರಿಸಲಾಗುತ್ತುದೆ. ಈ ಬಾರಿ ಅಧಿಕಮಾಸದ ಹಿನ್ನೆಲೆಯಲ್ಲಿ ಒಂದು ತಿಂಗಳ ಮುಂಚಿತವಾಗಿಯೇ ರಾಜರ ರತ್ನಖಚಿತ ಸಿಂಹಾಸನವನ್ನು ಜಿಲ್ಲಾಡಳಿತದ ಖಜಾನೆಯಿಂದ ತಂದು ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗಿದೆ. ಹೀಗಾಗಿ ಸಿಂಹಾಸನ ವೀಕ್ಷಣೆಗೆ ಕೂಡ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.

ಇನ್ನು ಸಿಂಹಾಸನ ಜೋಡಣೆ ಬೆನ್ನಲ್ಲೇ ಮೈಸೂರು ಅರಮನೆ ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದ್ದು, ವಯಸ್ಕರರಿಗೆ 70 ರೂ, ಮಕ್ಕಳಿಗೆ 35 ರೂ, ಸಿಂಹಾಸನ ವೀಕ್ಷಣೆಗೆ 50 ರೂ. ಶುಲ್ಕ ವಿಧಿಸಲಾಗಿದೆ.