Advertisement -Home Add
Crease wise (28th Jan)
KLE1099 Add

ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಸಿದ ಕೇಂದ್ರ ಸರ್ಕಾರ

6 ವಾರದಲ್ಲಿ 26ನೇ ಭಾರಿ ಡೀಸೆಲ್ ಬೆಲೆ ಏರಿಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಸರ್ಕಾರ ಇಂದು ಮತ್ತೊಮ್ಮೆ ಡೀಸೆಲ್ ಬೆಲೆಯನ್ನು ಏರಿಸಿದೆ. ಈ ಮೂಲಕ ಭಾರತದಲ್ಲಿ ತೈಲದ ಬೆಲೆ ಈವರೆಗಿನ ಐತಿಹಾಸಿಕ ದಾಖಲೆ ಮಟ್ಟಕ್ಕೆ ಏರಿಕೆಯಾದಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ಕೊರೊನಾದಂತಹ ಈ ಸಂಕಷ್ಟದ ಸಂದರ್ಭದಲ್ಲೀ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಬರೊಬ್ಬರಿ 23 ದಿನ‌ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಈಗ ಕಳೆದೊಂದು ವಾರದಲ್ಲಿ ಮೂರು ಭಾರೀ ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಮೊದಲು ಐದು ದಿನಗಳ ಹಿಂದೆ (ಜುಲೈ 7ರಂದು) ಪ್ರತಿ ಲೀಟರ್ ಡೀಸೆಲ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿತ್ತು. ನಂತರ ನಿನ್ನೆ (ಜುಲೈ 12ರಂದು) ಮತ್ತೆ 16 ಪೈಸೆ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಇಂದು ಪ್ರತಿ ಲೀಟರ್ ಡೀಸೆಲ್ ಗೆ 11 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಪ್ರತಿ ಲೀಟರ್ ಡೀಸೆಲ್ ಗೆ 11.53 ರೂಪಾಯಿ ಹೆಚ್ಚಳವಾದಂತಾಗಿದೆ.
ಯಾವಯಾವ ನಗರಗಳಲ್ಲಿ ಎಷ್ಟು ದರ ಇಲ್ಲಿದೆ ಮಾಹಿತಿ:
ದೆಹಲಿ- ಪೆಟ್ರೋಲ್ 80.43 ರೂ., ಡೀಸೆಲ್ 81.05 ರೂ.
ಮುಂಬೈ- ಪೆಟ್ರೋಲ್ 87.19 ರೂ., ಡೀಸೆಲ್ 79.28 ರೂ.
ಬೆಂಗಳೂರು- ಪೆಟ್ರೋಲ್ 83.02 ರೂ., ಡೀಸೆಲ್ 76. 60 ರೂ.
ಕೋಲ್ಕತ್ತಾ- ಪೆಟ್ರೋಲ್ 82.10 ರೂ., ಡೀಸೆಲ್ 76.16 ರೂ.
ಲಕ್ನೋ- ಪೆಟ್ರೋಲ್ 80.98 ರೂ., ಡೀಸೆಲ್ 72.92 ರೂ.
ರಾಂಚಿ- ಪೆಟ್ರೋಲ್ 80.29 ರೂ., ಡೀಸೆಲ್ 76.95 ರೂ.
ಭೂಪಾಲ್- ಪೆಟ್ರೋಲ್ 88.08 ರೂ., ಡೀಸೆಲ್ 80.39 ರೂ.
ಚೆನ್ನೈ- ಪೆಟ್ರೋಲ್ 83.63 ರೂ., ಡೀಸೆಲ್ 78.12 ರೂ.
ಪಾಟ್ನಾ- ಪೆಟ್ರೋಲ್ 83.31ರೂ., ಡೀಸೆಲ್ 77.88 ರೂ.