Beereshwara add 9
KLE1099 Add

19 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ರಮೇಶ್ ಜಾರಕಿಹೊಳಿ; ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ ಎಂದ ಮಾಜಿ ಸಚಿವ

ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸಂಪರ್ಕದಲ್ಲಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ ಆದರೆ ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ

-ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗಲೇ ರಾಜ್ಯದಲ್ಲಿ ಮತ್ತೆ ಪಕ್ಷಾಂತರ ಪರ್ವದ ಗಾಳಿ ಬೀಸುತ್ತಿದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಬಿಜೆಪಿ, ಜೆಡಿಎಸ್ ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ , ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್, ಜೆಡಿಎಸ್ ಸೇರಿ ಒಟ್ಟು 19 ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಅವರಲ್ಲಿ ಮೂವರು ಜೆಡಿಎಸ್ ನವರು. ಉಳಿದ 16 ಶಾಸಕರು ಕಾಂಗ್ರೆಸ್ ನವರು. ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್ ನ 16 ಶಾಸಕರನ್ನು ಪಕ್ಷಕ್ಕೆ ಕರೆತರುತ್ತೇನೆ ಎಂದು ಹೇಳಿದರು.

ನನ್ನ ಜತೆ ಬಿಜೆಪಿಗೆ ಬಂದವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ ನಲ್ಲಿದ್ದವರೇ ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಬಿಜೆಪಿ ತೊರೆಯುವುದೂ ಇಲ್ಲ. ನಮ್ಮ ಹೈಕಮಾಂಡ್, ಅಮಿತ್ ಶಾ ನಮ್ಮ ಜತೆ ಚೆನ್ನಾಗಿದ್ದಾರೆ. ನಾನು ಇಲ್ಲೇ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಮ್ಮ ನಡುವೆ ಸಂಬಂಧ ಚನ್ನಾಗಿದೆ. ಹಾಗಾಗಿ ಜೆಡಿಎಸ್ ಶಾಸಕರನ್ನು ನಾವು ಟಚ್ ಮಾಡಲ್ಲ. ಜೆಡಿಎಸ್ ನ ಮೂವರು ಶಾಸಕರು ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಆದರೆ ಕುಮಾರಸ್ವಾಮಿ ಒಳ್ಳೆಯವರು. ಹಾಗಾಗಿ ಜೆಡಿಎಸ್ ಶಾಸಕರನ್ನು ಸೆಳೆಯಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸಂಪರ್ಕದಲ್ಲಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ ಆದರೆ ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ ಎಂದು ಹೇಳಿದರು.

ಅದರ ಪರಿಣಾಮವನ್ನು ನೀವೇ ಮುಂದೆ ನೋಡುತ್ತೀರಿ; ತಿರುಗೇಟು ನೀಡಿದ ಸಿಎಂ

You cannot copy content of this page