Advertisement

ಇಂದು ಛಾಯಾ ಚಂದ್ರಗ್ರಹಣ

ಅಪರೂಪದ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಬಾನಂಗಳ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ರಾತ್ರಿ ಅಪರೂಪದ ಚಂದ್ರಗ್ರಹಣಕ್ಕೆ ಖಗೋಳ ಸಾಕ್ಷಿಯಾಗಲಿದೆ. ಇದು ಈ ವರ್ಷದ ಎರಡನೇ ಚಂದ್ರಗ್ರಹಣವಾಗಿದ್ದು, ಇಂದು ರಾತ್ರಿ ಛಾಯಾ ಚಂದ್ರಗ್ರಹಣ ಸಂಭವಿಸಲಿದೆ. ಇದನ್ನು ಸ್ಟ್ರಾಬೆರಿ ಮೂನ್ ಎಕ್ಲಿಪ್ಸ್ ಎಂತಲೂ ಕರೆಯುತ್ತಾರೆ.

ಸಾಮಾನ್ಯವಾಗಿ ಈ ಚಂದ್ರಗ್ರಹಣ ಅಷ್ಟಾಗಿ ಗೋಚರವಾಗುವುದಿಲ್ಲ. ಆಕಾಶ ಶುಭ್ರವಾಗಿದ್ದಲ್ಲಿ ಭಾರತ ಸೇರಿದಂತೆ ವಿಶ್ವದ ಕೆಲ ಭಾಗಗಳಲ್ಲಿ ಮಧ್ಯಭಾಗದಲ್ಲಿ ಸ್ವಲ್ಪಮಟ್ಟಿಗೆ ಗೋಚರಿಸಬಹುದು. ಗ್ರಹಣದ ವೇಳೆ ಚಂದ್ರನು ಭೂಮಿಯ ನೆರಳಿ­ನಲ್ಲಿಯೇ ಪರಿಭ್ರಮಿಸುವುದರಿಂದ ‘ಛಾಯಾ ಚಂದ್ರಗ್ರಹಣ’ ಎನ್ನಲಾಗುತ್ತದೆ.

ಅಮೆರಿಕದಲ್ಲಿ ಈಗ ಸ್ಟ್ರಾಬೆರಿ ಋುತು ಆರಂಭವಾ­ಗುವುದರಿಂದ ಜೂನ್‌ ತಿಂಗಳಿನಲ್ಲಿ ಸಂಭವಿಸುವ ಚಂದ್ರ­ಗ್ರಹಣವನ್ನು ‘ಸ್ಟ್ರಾಬೆರಿ ಚಂದ್ರಗ್ರಹಣ’ ಎಂದೂ ಕರೆಯಲಾಗುತ್ತದೆ. ಈ ಗ್ರಹಣದ ವೇಳೆ ಸ್ಟ್ರಾಬೆರಿ ಬಣ್ಣದಲ್ಲಿ ಚಂದ್ರ ಕಾಣುತ್ತಿರುವುದರಿಂದ ಇದಕ್ಕೆ ಸ್ಟ್ರಾಬೆರಿ ಮೂನ್‌ ಎಂದೂ ಕರೆಯುತ್ತಾರೆ.

ರಾತ್ರಿ 11.15ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು, 12.54ಕ್ಕೆ ಗ್ರಹಣ ಮಧ್ಯಕಾಲವಾಗಿದೆ. ಶನಿವಾರ ನಸುಕಿನ 2.34ಕ್ಕೆ ಗ್ರಹಣ ಮೋಕ್ಷವಾಗಲಿದೆ. ಅಂದಹಾಗೆ ಇದು ಈ ವರ್ಷದ ಎರಡನೇ ಚಂದ್ರಗ್ರಹಣವಾಗಿದೆ. ಈ ತಿಂಗಳಿನಲ್ಲಿಯೇ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಸಂಭವಿಸುತ್ತಿರುವುದು ವಿಶೇಷ. ಜೂ. 21 ರಂದು ಖಂಡಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ.