Beereshwara add 9
KLE1099 Add

ಬಾಲಿವುಡ್ ನಟಿ ಊರ್ವಶಿಗೆ ಹೊಸ ಜವಾಬ್ದಾರಿ ನೀಡಿದ ಕೇಂದ್ರ ಸರ್ಕಾರ

ಮಿಷನ್ ಪಾನಿ ಜಲಶಕ್ತಿ ರಾಯಭಾರಿಯಾಗಿ ಆಯ್ಕೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರನ್ನು ಮಿಷನ್ ಪಾನಿ ಜಲಶಕ್ತಿ, ಜಲ ಸಂರಕ್ಷಣೆ ಅಭಿಯಾನದ ರಾಯಭಾರಿಯಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.

ಊರ್ವಶಿ ರೌಟೇಲಾ ಫೌಮ್ಡೇಶನ್ ಮೂಲಕ ನೀರಿನ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸಿದ್ದ ಹಿನ್ನೆಲೆ ಹಾಗೂ ಉತ್ತರಾಖಂಡ್, ಪೌರಿ, ಗರ್ವಾಲ್, ಹರಿದ್ವಾರದ ನೂರಾರು ಸಮುದಾಯಗಳಿಗೆ ಶುದ್ಧ ಹಾಗೂ ಸುರಕ್ಷಿತ ನೀರು ಪೂರೈಕೆಗೆ ಸಹಾಯ ಮಾಡಿದ್ದನ್ನು ಗಮನಿಸಿ ಕೇಂದ್ರ ಸರ್ಕಾರ ಮಿಷನ್ ಪಾನಿ ಜಲಶಕ್ತಿ ರಾಯಭಾರಿಯನ್ನಾಗಿ ಊರ್ವಶಿಯವರನ್ನು ಆಯ್ಕೆ ಮಾಡಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಊರ್ವಶಿ, 2021ರ ಮಿಸ್ ಯುನಿವರ್ಸ್ ತೀರ್ಪುಗಾರಿಕೆಯಿಂದ ಆರಂಭಗೊಂಡು ದಾದಾ ಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜ್ಯೂರಿ ಆಗುವವರೆಗೂ ಕೆಲಸ ಮಾಡಿದ್ದೇನೆ. ಈ ಎಲ್ಲಾ ವಿಶ್ವದರ್ಜೆಯ ಅವಕಾಶಗಳನ್ನು ಸ್ವೀಕರಿಸುತ್ತಿರುವುದಕ್ಕೆ ಕೃತಜ್ಞನಾಗಿದ್ದೇನೆ. ಇದೀಗ ಕೇಂದ್ರ ಸರ್ಕಾರ ನನಗೆ ಹೊಸ ಅವಕಾಶ ನೀಡಿದೆ. ಪ್ರಧಾನಿ ಮೋದಿ, ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ಹೌದು, ಅವರು ನನ್ನ ಸಂಪರ್ಕದಲ್ಲಿದ್ದಾರೆ; ಸಿದ್ದರಾಮಯ್ಯ

You cannot copy content of this page