
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಲ್ಲೆಡೆ ಲಾಕ್ ಡೌನ್ ನಿಂದಾಗಿ ಸಾಮಾನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ಪಡೆಯಲು ತೀವ್ರ ತೊಂದರೆಯಾಗಿದೆ. ಜ್ವರ, ಕೆಮ್ಮು, ನೆಗಡಿಯಂತಹ ಸಣ್ಣ ಪುಟ್ಟ ರೋಗದಿಂದ ಬಳಲುತ್ತಿರುವವರಿಗೆ ಮನೆಯಿಂದ ಹೊರಗೆ ಬರಲೂ ಸಾಧ್ಯವಾಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 23 ಸ್ಥಳಗಳಲ್ಲಿ ಶುಕ್ರವಾರದಿಂದ ಪ್ಲ್ಯು ಕ್ಲಿನಿಕ್ ಆರಂಭಿಸಿದ್ದಾರೆ.
ಬಹಳಷ್ಟು ಖಾಸಗಿ ಆಸ್ಪತ್ರೆಗಳು ಕಳೆದ 15 ದಿನಗಳಿಂದ ಸಂಪೂರ್ಣ ಬಂದಾಗಿವೆ. ಸಾಮಾನ್ಯ ಸಣ್ಣ ಸಣ್ಣ ಕಾಯಿಲೆಗಳಾದ ಕೆಮ್ಮು, ನೆಗಡಿ, ಮೈ ಕೈ ನೋವು ಆದವರಿಗೆ ದವಾಖಾನೆಗೆ ಹೋಗಲು ತುಂಬಾ ಅನಾನುಕೂಲವಾಗುತ್ತಿದೆ. ಈ ಸಮಸ್ಯೆಗಳಿಗೆ ತತ್ ಕ್ಷಣ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಪ್ಲ್ಯು ಕ್ಲಿನಿಕ್ ” ಆರಂಭಿಸಲಾಗಿದೆ.
ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಗೆ ಬರುವ 26 ವಾರ್ಡ್ ಗಳಲ್ಲಿ ಬರುವ ಸರಕಾರಿ ಶಾಲೆಗಳು ಹಾಗೂ ಮಂಗಲ ಕಾರ್ಯಾಲಯಗಳನ್ನು ಬಳಸಿಕೊಂಡು ಕ್ಲಿನಿಕ್ ಆರಂಭಿಸಿದ್ದು, ಈ ಬಗ್ಗೆ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳು, ಖಾಸಗಿ ಡಾಕ್ಟರ್ ಗಳೊಂದಿಗೆ ಶಾಸಕ ಅಭಯ ಪಾಟೀಲ ಚರ್ಚೆ ನಡೆಸಿ, ಶುಕ್ರವಾರದಿಂದ ಕ್ಲಿನಿಕ್ ಆರಂಭಿಸಿದ್ದಾರೆ.
ಡಾಕ್ಟರ್ ಗಳ ಸುರಕ್ಷತೆ ದೃಷ್ಟಿಯಿಂದ ಬೇಕಾದ ಪಿಪಿಇ ಕಿಟ್ಟ್ ನ್ನು ಹಾಗೂ ರೋಗಿಗಳಿಗೆ ಔಷಧಿಗಳನ್ನು ಸಹ ಅಭಯ ಪಾಟೀಲ ವ್ಯವಸ್ಥೆ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ