Kannada NewsKarnataka NewsNationalPolitics

*ಸ್ಫೋಟಕ ಹೇಳಿಕೆ ನೀಡಿದ ಲಾರೆನ್ಸ್ ಬಿಷ್ಟೋಯ್*

ಪ್ರಗತಿವಾಹಿನಿ ಸುದ್ದಿ: ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆ ಮಾಡಿದ್ದ ಲಾರೆನ್ಸ್ ಬಿಷ್ಟೋಯ್ ಸ್ಫೋಟಕ ಹೇಳಿಕೆ ನೀಡಿದ್ದು, ದೇಶಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ತಿಳಿದಿದೆ ಎಂದು ಹೇಳಿದರು.

ಈ ಬಗ್ಗೆ ಪತ್ರಕರ್ತರೊಬ್ಬರು ಲಾರೆನ್ಸ್ ಬಿಷ್ಟೋಯ್ ಬಳಿ ನೀವು ಯಾಕೆ ಖಲಿಸ್ತಾನವನ್ನು ವಿರೋಧಿಸುತ್ತಿರಿ.? ಆ ದೇಶದ ಬಗ್ಗೆ ಚರ್ಚೆ ಆರಂಭವಾದಾಗ ನೀವು ಹುಟ್ಟಿರಲಿಲ್ಲ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಲಾರೆನ್ಸ್ ಬಿಷ್ಟೋಯ್, ನನ್ನ ದೇಶ ವಿಭಜನೆ ಆಗಬೇಕು ಎಂದು ನಾನು ಎಂದಿಗೂ ಬಯಸುವುದಿಲ್ಲ. ನಾನು ಚಿಕ್ಕವನೆ ಇರಬಹುದು, ಆದರೆ ನಾನು ವಿದ್ಯಾವಂತ ಎಂದು ಹೇಳಿದ್ದಾನೆ.

ಅಲ್ಲದೇ ದೇಶಕ್ಕಾಗಿ ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಯಾರಾದರೂ ಒಬ್ಬ ಕೇರಳವನ್ನು ವಿಭಜನೆ ಮಾಡಬೇಕು ಎಂದು ಹೇಳಿದರೆ, ಕೇರಳಕ್ಕೂ ನಿಮಗೂ ಏನು ಸಂಬಂಧ ಎಂದು ಪ್ರಶ್ನಿಸಲು ಸಾದ್ಯವೇ.? ದೇಶದ ಮೇಲೆ ಗೌರವವಿದೆ ದೇಶವನ್ನು ವಿಭಜನೆ ಮಾಡಲು ಸಾಧ್ಯವಿಲ್ಲ ಎಂದು ಲಾರೆನ್ಸ್ ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button