Kannada NewsLatest

*ಬ್ಯಾಟರಿ ಹಾಗೂ ಇ-ತ್ಯಾಜ್ಯ ವಿಲೇವಾರಿಗೆ ಕಾನೂನು: ಸಚಿವ ಆನಂದ್ ಸಿಂಗ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಕರಿತು ೨೦೧೬ರಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಶೀಘ್ರವಾಗಿ ಎಲೆಕ್ಟಿçಕಲ್ ವಾಹನಗಳ ಬ್ಯಾಟರಿ ಹಾಗೂ ಇ-ತ್ಯಾಜ್ಯ ವಿಲೇವಾರಿಗೆ ವಿಶೇಷ ಕಾನೂನು ರೂಪಿಸುವುದಾಗಿ ಪ್ರವಾಸೋದ್ಯಮ ಹಾಗೂ ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಆನಂದ್ ಸಿಂಗ್ ಹೇಳಿದರು.

ಸೋಮವಾರ ವಿಧಾನ ಪರಿಷತ್ ಪ್ರಶೋತ್ನರ ಕಲಾಪದಲ್ಲಿ ಶಾಸಕರಾದ ಕೆ.ಎ.ತಿಪ್ಪೇಸ್ವಾಮಿ ಹಾಗೂ ಡಿ.ಎಸ್.ಅರುಣ್ ಅವರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ರಾಜ್ಯದಲ್ಲಿ ವಾರ್ಷಿಕವಾಗಿ ೨೦೧೮-೧೯ ರಲ್ಲಿ ೯೨೯೪.೯೪ ಟನ್, ೨೦೧೯-೨೦ ರಲ್ಲಿ ೪೪,೨೪೦ ಟನ್ ಹಾಗೂ ೨೦೨೦-೨೧ ರಲ್ಲಿ ೯೬೧೭೫ ಟನ್ ಇ-ತ್ಯಾಜ್ಯ ಉತ್ಪಾದನೆಯಾಗಿದೆ. ೧೮೦ ಇ-ತ್ಯಾಜ್ಯ ಸಂಸ್ಕರಣೆ ಮತ್ತು ಮರುಬಳಕೆ ಘಟಕಗಳು ಇವೆ. ಇದರಲ್ಲಿ ೯೩ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ೪೭ ಘಟಕಗಳು ಸ್ಥಾಪನೆ ಹಂತದಲ್ಲಿವೆ. ೪೦ ಘಟಕಗಳು ಮುಚ್ಚಲ್ಪಟ್ಟಿವೆ. ಸರ್ಕಾರಿಂದ ಹೊಸ ಕೈಗಾರಿಕಾ ನೀತಿ ೨೦೨೦-೨೫ ರನ್ವಯ ಕೈಗಾರಿಕೆಗಳಲ್ಲಿ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಪುನರ್ ಬಳಕೆ ಯಂತ್ರೋಪಕರಣಗಳನ್ನು ಅಳವಡಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯಧನ ನೀಡಲಾಗುವುದು ಎಂದರು.

ಶಾಸಕ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ ಬೆಂಗಳೂರು ವಿಶ್ವದಲ್ಲೇ ಹೆಚ್ಚು ಇ-ತ್ಯಾಜ್ಯ ಉತ್ಪಾದಿಸುವ ನಗರಗಳಲ್ಲಿ ಒಂದಾಗಿದೆ. ದೇಶದಲ್ಲಿ ೩ನೇ ಸ್ಥಾನದಲ್ಲಿದೆ. ಇ-ತ್ಯಾಜ್ಯ ಮರುಬಳಕೆಗೆ ಯೋಗ್ಯವಾಗಿದೆ. ಒಂದು ಟನ್ ಅದಿರು ಸಂಸ್ಕರಿಸಿದರೆ ೬ ಗ್ರಾಂ ಚಿನ್ನ ದೊರೆಯುತ್ತದೆ. ಆದರೆ ೧ ಟನ್ ಇ-ತ್ಯಾಜ್ಯ ಸಂಸ್ಕರಿಸಿದರೆ ೨೪ ಗ್ರಾಂ ಚಿನ್ನದ ಜೊತೆಗೆ, ತಾಮ್ರಾ, ಸಿಲಿಕಾ, ಕ್ಯಾಡ್ಮಿಯಮ್, ಅಲ್ಯೂಮಿನಯನ್ ಲೋಹಗಳು ಸೇರಿ ಮರು ಬಳಕೆಯ ಪ್ಲಾಸ್ಟಿಕ್ ದೊರಕುತ್ತೆ. ಸರ್ಕಾರ ಇ-ತ್ಯಾಜ್ಯ ಮರುಬಳಕೆಗೆ ಕಠಿಣ ನಿಯಮಗಳನ್ನು ಜಾರಿ ಗೊಳಿಸಬೇಕು ಎಂದರು.

ಶಾಸಕ ಡಿ.ಎಸ್.ಅರುಣ್ ಮಾತನಾಡಿ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿ.ಪಿ.ಪಿ) ಮಾದರಿಯಲ್ಲಿ ಇ-ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ಜರ್ಮನಿ ಸೇರಿದಂತೆ ಹಲವು ರಾಷ್ಟçಗಳಲ್ಲಿ ಇ-ವೆಹಿಕಲ್‌ಗಳನ್ನು ನಿಷೇಧಿಸಲಾಗಿದೆ. ಕಾರಣ ಬ್ಯಾಟರಿಗಳು ತ್ಯಾಜ್ಯ ಹೆಚ್ಚಾಗುತ್ತಿರುವುದು. ಆದ್ದರಿಂದ ಸರ್ಕಾರ ಬ್ಯಾಟರಿ ವಿಲೇವಾರಿಗೆ ವಿಶೇಷ ಕಾನೂನು ರೂಪಿಸಬೇಕು ಎಂದರು.

*ಪೋಕ್ಸೋ ಪ್ರಕರಣ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ*

https://pragati.taskdun.com/pocso-casespecial-courtaraga-jnanendravidhana-parishath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button