Latest

ಗ್ರಾಮೀಣ ಪ್ರತಿಭೆಗಳಿಗೆ ಲಕ್ಷ್ಮಿ ಅವಾರ್ಡ್ಸ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಲಕ್ಷ್ಮಿ ಹೆಬ್ಬಾಳಕರ್ ಶಾಸಕರಾದ ವರ್ಷದೊಳಗೆ  ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅತ್ಯಂತ ಹೆಚ್ಚು ಅಭಿವೃದ್ಧಿ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ತಂದು ಹಲವರ ಹುಬ್ಬೇರುವಂತೆ ಮಾಡಿರುವ ಅವರು, ತಮ್ಮ ಜನ್ಮ ದಿನವನ್ನೇ ಮತದಾರರಿಗೋಸ್ಕರ ಬದಲಾಯಿಸುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.

Home add -Advt

ಇದರ ಜೊತೆಗೆ ಇದೀಗ ತಮ್ಮ ಜನ್ಮ ದಿನದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಪ್ರತಿ ವರ್ಷ ಲಕ್ಷ್ಮಿ ಅವಾರ್ಡ್ಸ ಹೆಸರಲ್ಲಿ ಸಾಧಕರನ್ನು ಸನ್ಮಿಸುವ ನಿರಧಾರವನ್ನು ಅವರ ಪ್ರಕಟಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೈಸ್ಕೂಲ್ ವಿದ್ಯಾರ್ಥಿಗಳ ಭವ್ಯ ಸನ್ಮಾನ ಸಮಾರಂಭ ಭಾನುವಾರ ರಾತ್ರಿ ನಡೆಯಿತು. ಕ್ಷೇತ್ರದ ಎಲ್ಲ ಪ್ರೌಢ ಶಾಲೆಗಳಿಗೆ ಕಳೆದ ಎಸ್ಎಸ್ಎಲ್ ಸಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದ ಮಕ್ಕಳನ್ನು ಗಣ್ಯರು ಹಾಗೂ ಮಠಾಧೀಶರ ಉಪಸ್ಥಿತಿಯಲ್ಲಿ ಸತ್ಕರಿಸಲಾಯಿತು. 

ಮುಂದಿನ ವರ್ಷದಿಂದ ತಮ್ಮ ಜನ್ಮ ದಿನದ ಸಂದರ್ಭದಲ್ಲಿ 2 ದಿನಗಳ ಬೆಳಗಾವಿ ಗ್ರಾಮೀಣ ಉತ್ಸವ ಆಚರಿಸುವುದಾಗಿ ಅವರು ಘೋಷಿಸಿದರು. 

Related Articles

Back to top button