Kannada NewsKarnataka NewsLatest

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಕ್ಕರೆಯ ಶಾಸಕಿ ; ಮನೆಯ ಮಗಳಂತೆ ​ಇನ್ನಿಲ್ಲದ ಪ್ರೀತಿ ತೋರಿದ ನಾಗರಿಕರು

ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಬಂದ ಶಾಸಕಿಯನ್ನು ಕಂಡು ಸಂಭ್ರಮಿಸಿದ ಜನರು

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕಂಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನತೆಗೆ ಎಲ್ಲಿಲ್ಲದ ಪ್ರೀತಿ, ನಂಟು. ಶಾಸಕಿ ಎನ್ನುವುದಕ್ಕಿಂತ ತಮ್ಮದೇ ಮನೆ ಮಗಳನ್ನು ಕಂಡಷ್ಟು ಇಷ್ಟ. ಲಕ್ಷ್ಮಿ ಹೆಬ್ಬಾಳಕರ್ ಕ್ಷತ್ರದ ಯಾವ ಹಳ್ಳಿಗೆ ಹೋದರೂ ಅಲ್ಲಿನ ಮಹಿಳೆಯರು ಬಂದು ತಬ್ಬಿಕೊಳ್ಳುತ್ತಾರೆ, ಹಿರಿಯರು ಬಂದು ಆಶಿರ್ವದಿಸುತ್ತಾರೆ, ಮಕ್ಕಳು ಬಂದು ನಲಿದಾಡುತ್ತಾರೆ, ಯುವಕ -ಯುವತಿಯರು ಬಂದು ಅಕ್ಕನ ಜೊತೆ ಸೆಲ್ಫಿಗೆ ಮುಗಿಬೀಳುತ್ತಾರೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದಲ್ಲಿ ಅಂತದ್ದೊಂದು ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಎಲ್ಲರ ವಿಶ್ಸಾಸ ಗಳಿಸಿಕೊಂಡಿರುವ ಅವರು, ಕ್ಷೇತ್ರದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ. ಬದುಕಿಗೆ ಉತ್ಸಾಹ ತುಂಬಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ತೋರಿಸುತ್ತಿದ್ದಾರೆ. ಶಾಸಕರೆಂದು ಯಾವುದೇ ಅಹಂ ಇಲ್ಲದೆ, ಯಾವುದೇ ಅಂತರ ಕಾಯ್ದುಕೊಳ್ಳದೆ ಅಕ್ಷರಶಃ ಗ್ರಾಮೀಣ ಕ್ಷೇತ್ರದ ಕುಟುಂಬದ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ. 
 
​ಸೋಮವಾರ ಲಕ್ಷ್ಮಿ ಹೆಬ್ಬಾಳಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂಕಲ್ಪ ಲೇಔಟ್, ಟೀಚರ್ಸ್ ಕಾಲೋನಿ ಹಾಗೂ ಮರಾಠಾ ಕಾಲೋನಿಗಳ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಯ ಸಲುವಾಗಿ ತೆರಳಿದಾಗ ಅಲ್ಲಿನ ಜನ ತೋರಿದ ಪ್ರೀತಿ, ಅಕ್ಕರೆಯೇ ಇದಕ್ಕೆಲ್ಲ ಸಾಕ್ಷಿ. ಶಾಸಕರು ಬಂದರು ಎಂದು ಯಾರಿಗೂ ಅನಿಸಿಯೇ ಇಲ್ಲ. ತಮ್ಮದೇ ಮನೆೆಯ ಮಗಳು ಬಂದಳು ಎನ್ನುವ ರೀತಿಯಲ್ಲಿ ಸಂಭ್ರಮಿಸಿದರು. ಹಿರಿಯರು, ಅಜ್ಜಿಯರು ಬಂದು ತಲೆ ನೇವರಿಸಿದರು, ಆಶಿರ್ವದಿಸಿದರು. ಹೆಬ್ಬಾಳಕರ್ ಕೂಡ ಅಲ್ಲಿನ ಮಕ್ಕಳನ್ನು ಅಷ್ಟೇ ಪ್ರೀತಿಯಿಂದ ಸಲಹಿ, ಸಂತೈಸಿದರು.
ಇಲ್ಲಿನ ರಸ್ತೆ ಹಾಗೂ ಚರಂಡಿಗಳ ಅಭಿವೃದ್ಧಿಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನದ ವತಿಯಿಂದ 65 ಲಕ್ಷ ರೂ,ಗಳು ಮಂಜೂರಾಗಿದ್ದು, ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಹೆಬ್ಬಾಳಕರ್ ಭೂಮಿ ಪೂಜೆಯನ್ನು ನೆರವೇರಿಸಿ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ ಸ್ಥಳೀಯ ಮುಖಂಡರು, ಹಿರಿಯರು, ಸ್ಥಳೀಯ ನಿವಾಸಿಗಳು, ಪಾವುಸ್ಕರ್, ಕಪೀಲ ಸಾಂಬ್ರೆಕರ್, ಶಿಲ್ಪಾ ನಾಯಕ್ ​ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button