ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಜನರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ವಿನೂತನ ಯೋಜನೆ ಪೆನ್ಶನ್ ಅದಾಲತ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಪುನಾರಂಭಿಸಲಿದ್ದಾರೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಕುದ್ರೆಮನೆ, ಶುಕ್ರವಾರ ಬೆಳಗ್ಗೆ 10 ಗಂಟೆಗೆ ತುರಮುರಿ ಹಾಗೂ ಶನಿವಾರ ಬೆಳಗ್ಗೆ 10 ಗಂಟೆಗೆ ಉಚಗಾವಿ ಗ್ರಾಮಗಳಲ್ಲಿ ಅದಾಲತ್ ನಡೆಯಲಿದೆ.
ಸರಕಾರದಿಂದ ಕೊಡಲಾಗುವ ವಿಧವಾ ಮಾಸಾಶನ, ಅಂಗವಿಕಲರ ಮಾಸಾಶನ, ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಮಾಸಾಶನಗಳ ಅರ್ಜಿ ಪಡೆದು ಅರ್ಹರಿಗೆ ಸ್ಥಳದಲ್ಲೇ ಮಂಜೂರು ಮಾಡಿಸುವ ಯೋಜನೆ ಇದಾಗಿದೆ.
ಅರ್ಜಿ ಸಲ್ಲಿಸಲು ನಿಗದಿತ ಅರ್ಜಿ ನಮೂನೆ, 4 ಫೋಟೊ, ಆಧಾರ ಕಾರ್ಡ್, ವೇತನ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ರೇಶನ್ ಕಾರ್ಡ್ ತರಬೇಕು.
ಈ ಹಿಂದೆ 7 ಗ್ರಾಮಗಳಲ್ಲಿ ಪೆನ್ಶನ್ ಅದಾಲತ್ ನಡೆಸಲಾಗಿದ್ದು, 800 ಕ್ಕಿಂತ ಹೆಚ್ಚು ಜನರಿಗೆ ಪೆನ್ಶನ್ ಮಂಜೂರಾಗಿದೆ.
ಜನರು ಸರಕಾರಿ ಕಚೇರಿಗೆ ಅಲೆಯುವ ಬದಲು ಶಾಸಕರೇ ಜನರ ಮನೆ ಬಾಗಿಲಿಗೆ ಯೋಜನೆ ತಲುಪಿಸುತ್ತಿದ್ದು,
ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ