Kannada NewsKarnataka NewsLatest

ಹಿಂದ್ ಕೇಸರಿ ಚಂಬಾಮುತ್ನಾಳ ಗ್ರಂಥ ಲೋಕಾರ್ಪಣೆಗೊಳಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

 ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ –   ಹಿಂದ್ ಕೇಸರಿ ಚಂಬಾ ಪೈಲ್ವಾನ ಮುತ್ನಾಳ ಇವರ 21ನೇ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ” ಹಿಂದ್ ಕೇಸರಿ ಚಂಬಾಮುತ್ನಾಳ ” ಗ್ರಂಥ ಲೋಕಾರ್ಪಣೆಗೊಳಿಸಿದರು.
ಚಂಬಾ ಮುತ್ನಾಳ ಅವರು ರಾಷ್ಟ್ರೀಯ ಕುಸ್ತಿಪಟುವಾಗಿದ್ದು, ಅನೇಕ ರಾಜ್ಯಗಳ​ಲ್ಲಿ​ ​ ಕುಸ್ತಿ ಕಲೆ​ಗೆ​ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂ​ಡಿದ್ದರು., ಹಲವಾರು ಕುಸ್ತಿ ಪಟುಗಳಿಗೆ ಸ್ಪೂರ್ತಿಯಾಗಿ, ತರಬೇತಿ​ಗಳ​ನ್ನು ಸಹ ನೀಡಿ​ದ್ದರು. ಚಂಬಾ ಮುತ್ನಾಳ ನಮ್ಮ ಜಿಲ್ಲೆಯ ಹೆಮ್ಮೆಯ ಕುಸ್ತಿಪಟುವಾಗಿ 1975 ರಲ್ಲಿ ದೇಶದ ಅತಿದೊಡ್ಡ ಕುಸ್ತಿ ಪ್ರಶಸ್ತಿಯಾದ ಹಿಂದ್ ಕೇಸರಿಯನ್ನು ಗೆದ್ದ ಏಕೈಕ ಕನ್ನಡಿಗನಾಗಿ ಹೊರಹೊಮ್ಮಿರುವುದು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯ​ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ಪ್ರಶಂಸಿಸಿದರು.​
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು​ ಕೇದಾರ ಪೀಠ​ದ​ ಶ್ರೀ  ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ರುದ್ರಗೌಡ ಪಾಟೀಲ, ಪಾರಿಶ್ ಪಾರಿಶ್ವಾಡ, ಈರನಗೌಡ ಪಾಟೀಲ, ಯುವರಾಜ ಕದಂ, ಅಡಿವೆಪ್ಪಗೌಡ ಪಾಟೀಲ, ಪಿ ಜಿ ಕೆಂಪಣ್ಣವರ, ಬಸವರಾಜ ಜಗಜಂಪಿ, ರಾಮಕೃಷ್ಣ ‌ಮರಾಠೆ, ರತನ ಮಠಪತಿ ಹಾಗೂ ಹಲವಾರು ಕುಸ್ತಿಪಟುಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button