Kannada NewsKarnataka NewsLatest

ರೆಮ್ ಡಿಸಿವರ್ ಹಂಚಿಕೆಯಲ್ಲಿ ಬೆಳಗಾವಿಗೆ ಭಾರಿ ತಾರತಮ್ಯ: ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮ್ ಡಿಸಿವರ್ ಇಂಜಕ್ಷನ್ ಹಂಚಿಕೆಯಲ್ಲಿ ಬೆಳಗಾವಿ ಜಿಲ್ಲೆಗೆ  ಭಾರಿ ತಾರತಮ್ಯ ಮಾಡಲಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಶುಕ್ರವಾರ ರಾಜ್ಯಕ್ಕೆ ಒಟ್ಟೂ 40 ಸಾವಿರ ರೆಮ್ ಡಿಸಿವರ್ ಇಂಜಕ್ಷನ್ ಹಂಚಿಕೆಯಾಗಿದ್ದರೂ ಬೆಳಗಾವಿ ಜಿಲ್ಲೆಗೆ 3 ದಿನಕ್ಕೆ ಕೇವಲ 400 ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೊರೋನಾ ಪಾಸಿಟಿವ್ ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ 2,700 ಇಂಜಕ್ಷನ್ ಬೇಕಾಗುತ್ತದೆ. ಆದರೆ ಕಳೆದ 3 ದಿನ ಸೇರಿ ಕೇವಲ 400 ಹಂಚಿಕೆಯಾಗಿದೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಬೆಳಗಾವಿ ದೊಡ್ಡದಾದ ಜಿಲ್ಲೆ. ಇಲ್ಲಿ ಸರಾಸರಿ 900ಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ಪತ್ತೆಯಾಗುತ್ತಿದೆ. ಇದರಲ್ಲಿ ಅರ್ಧದಷ್ಟು ಜನರಿಗೆ ಇಂಜಕ್ಷನ್ ಅಗತ್ಯವೆಂದು ಪರಿಗಣಿಸಿದರೂ 450 ಜನರಿಗೆ ತಲಾ 6ರಂತೆ 2700 ಇಂಜಕ್ಷನ್ ಬೇಕಾಗುತ್ತದೆ. ಆದರೆ 3 ದಿನಕ್ಕೆ 400 ಹಂಚಿಕೆ ಮಾಡಿದರೆ ಯಾವುದಕ್ಕೆ ಸಾಕಾಗುತ್ತದೆ? ಇಂಜಕ್ಷನ್ ಸಿಗದೆ ಜನ ಸಾಯುತ್ತಿದ್ದಾರೆ. ಬೆಳಗಾವಿಗೆ ಬೇರ ಜಿಲ್ಲೆಗಳಿಗಿಂತ ಹೆಚ್ಚು ಪೂರೈಸುವ ಬದಲು ಕಡಿಮೆ ಪೂರೈಸಲಾಗುತ್ತಿದೆ. ಈ ತಾರತಮ್ಯವನ್ನು ಕೂಡಲೇ  ಸರಿಪಡಿಸಬೇಕು ಎಂದು ಲಕ್ಷ್ಮಿ ಹೆಬ್ಬಾಳಕ್ ಒತ್ತಾಯಿಸಿದ್ದಾರೆ.

 

Home add -Advt

Related Articles

Back to top button