Kannada NewsKarnataka NewsLatest
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ‘ವಿದ್ವತ್ ಕಲಿಕಾ ಆ್ಯಪ್’ – ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿದೆ ಲಿಂಕ್

ಬೆಳಗಾವಿ ಸ್ಮಾರ್ಟಸಿಟಿ ಸಹಯೋಗದಲ್ಲಿ ‘ವಿದ್ವತ್’ ಸಂಸ್ಥೆಯಿಂದ ವಿನೂತನ ಪ್ರಯತ್ನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಿಂದ ಪಠ್ಯಕ್ರಮದ ಎಲ್ಲವೂ ಸುಲಭವಾಗಿ ಬೆರಳ ತುದಿಯಲ್ಲಿ ಲಭಿಸುವಂತಾಗಲು ಬೆಳಗಾವಿ ಸ್ಮಾರ್ಟಸಿಟಿ ಲಿಮಿಟೆಡ್ ಸಹಯೋಗದಲ್ಲಿ ವಿದ್ವತ್ ಎಂಬ ಸಂಸ್ಥೆಯು ಈ “ವಿದ್ವತ್ ಕಲಿಕಾ ಆ್ಯಪ್’ ಅನ್ನು ಬೆಳಗಾವಿ ಜಿಲ್ಲೆಯಾದ್ಯಂತ ಪರಿಚಯಿಸುತ್ತಿದೆ.

10ನೇ ತರಗತಿಯ ಪಠ್ಯಕ್ರಮಗಳ ಎಲ್ಲಾ ವಿಷಯಗಳು ದೃಶ್ಯ ಮಾಧ್ಯಮ ಸಹಿತ ಇದರಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಜೊತೆಗೆ ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಕಲಿಕಾ ಆ್ಯಪ್‍ನ ಅನುಕೂಲಗಳು:
1. ಸಂಪನ್ಮೂಲಗಳ ಕ್ರೋಢೀಕರಣ
2. ಕೌಶಲ್ಯಗಳ ಸುಧಾರಣೆ
3. ಕೇಂದ್ರೀಕೃತ ಕಲಿಕೆ
4. ಸಮಯದ ಸದ್ಭಳಕೆ
5. ವ್ಯವಸ್ಥಿತ ಕಲಿಕೆ
7. ವಿನೂತನ ಕಲಿಕಾ ವಿಧಾನಗಳು
9. ಪೋರ್ಟಬಿಲಿಟಿ
10. ಸಂತೋಷಕರ ಹಾಗೂ ವಿನೋದಮಯ ಕಲಿಕೆ
ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ –
https://play.google.com/store/
(ಎಲ್ಲ ವಿದ್ಯಾರ್ಥಿಗಳಿಗೂ ತಲುಪುವತೆ ಈ ಸುದ್ದಿ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ