National

*ಮದುವೆ ಮಂಟಪಕ್ಕೆ ಚಿರತೆ ಎಂಟ್ರಿ: ದಿಕ್ಕಾಪಾಲಾಗಿ ಓಡಿದ ಜನ!*

ಪ್ರಗತಿವಾಹಿನಿ ಸುದ್ದಿ: ಕರೆಯದೇ ಇದ್ದರೂ ಅತಿಥಿ ಮದುವೆಗೆ ಬಂದು ಭಯ ಹುಟ್ಟಿಸಿದೆ. ಉತ್ತರ ಪ್ರದೇಶದ ಲಖನೌ ನಗರದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಚಿರತೆಯೊಂದು ನುಗ್ಗಿ ಆತಂಕ ಹುಟ್ಟುಹಾಕಿದೆ. 

ಎಲ್ಲರೂ ಭರ್ಜರಿಯಾಗಿ ಡಿನ್ನ‌ರ್ ಪಾರ್ಟಿ ಮಾಡುವ ಸಮಯದಲ್ಲೇ ಹೀಗೆ ಚಿರತೆ ಎಂಟ್ರಿ ಕೊಟ್ಟಿದೆ. ಚಿರತೆಯನ್ನು ನೋಡಿದ್ದೇ ತಡ ಮದುವೆಗೆ ಬಂದಿದ್ದ ಅತಿಥಿಗಳು ಅಲ್ಲಿಂದ ಎಸ್ಕೆಪ್ ಆಗಿದ್ದಾರೆ. ಇನ್ನು ಮದುವೆ ಮಂಟಪದಲ್ಲಿದ್ದ ವಧು-ವರ ಕೂಡ ಆ ಕ್ಷಣವೇ ಅಲ್ಲಿಂದ ಓಡಿ ಹೋಗಿ ಕಾರಿನ ಡೋರ್ ಹಾಕಿಕೊಂಡು ಬಚಾವ್ ಆಗಿದ್ದಾರೆ. ಹೀಗೆ ಚಿರತೆ ಬಂದ ಸುದ್ದಿ ಕೇಳಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಈ ತಿಕ್ಕಾಟದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಗಾಯಗೊಂಡಿದ್ದಾರೆ.

Related Articles

Back to top button