ಪ್ರಗತಿ ವಾಹಿನಿ ಸುದ್ದಿ ನವದೆಹಲಿ – ಉಕ್ರೇನ್- ರಷ್ಯಾ ಯುದ್ಧ ಭಾರತಕ್ಕೆ ಪಾಠ ಕಲಿಸಿದೆ. ಮುಂದಿನ ದಿನಗಳಲ್ಲಿ ಭಾರತ ತನ್ನದೇ ಆದ ಯುದ್ಧಾಸ್ತ್ರಗಳನ್ನು ನಿರ್ಮಿಸಿಕೊಳ್ಳಬೇಕು ಎಂಬ ಸತ್ಯ ಗೋಚರವಾಗಿದೆ ಎಂದು ಆರ್ಮಿ ಚೀಫ್ ಜನರಲ್ ಮುಕುಂದ ನರವಣೆ ಹೇಳಿದ್ದಾರೆ.
ಉಕ್ರೇನ್- ರಷ್ಯಾ ಯುದ್ಧದ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅತ್ತ ಯುರೋಪಿಯನ್ ಒಕ್ಕೂಟದ ಸಮರ್ಥನೆಯನ್ನೂ ಮಾಡಲಾಗದೆ ಇತ್ತ ರಷ್ಯಾ ಪರವಾಗಿಯೂ ನಿಲ್ಲಲಾಗದೆ ಇಕ್ಕಟ್ಟಿಗೆ ಸಿಲುಕಿದೆ. ತಟಸ್ಥ ನಿಲುವು ತಳೆಯಲು ಯತ್ನಿಸಿದರೂ ಯುರೋಪಿಯನ್ ಒಕ್ಕೂಟ ಅದನ್ನು ರಷ್ಯಾ ಪರವಾದ ನಿಲುವು ಎಂದೇ ಭಾವಿಸಿದೆ.
ಭಾರತ ಮೊದಲಿಂದಲೂ ಶಸ್ತ್ರಾಸ್ತ್ರ ಖರೀದಿಗೆ ಹೆಚ್ಚಾಗಿ ರಷ್ಯಾವನ್ನೇ ಅವಲಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಥ ಸಂದರ್ಭದಲ್ಲಿ ರಷ್ಯಾ ವಿರುದ್ಧ ನಿಲುವು ತಳೆದರೆ ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆ ಎದುರಿಸಬೇಕಾದ ಸಂದರ್ಭ ಬರಲಿದೆ. ಅತ್ತ ಯುರೋಪ್ ರಾಷ್ಟ್ರಗಳಾದ ಫ್ರಾನ್ಸ್ ಮೊದಲಾದ ದೇಶಗಳಿಂದಲೂ ಭಾರತ ಶಸ್ತ್ರಾಸ್ತ್ರ ಖರೀದಿಸುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಉಕ್ರೇನ್- ರಷ್ಯಾ ಯುದ್ಧ ಭಾರತವನ್ನು ಯಾರ ಪರವಾಗಿಯೂ ನಿಲ್ಲಲಾಗದ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನದೇ ಆದ ಶಸ್ತ್ರಾಸ್ತ್ರಗಳನ್ನು ಇಂಡಿಜೀನಿಯಸ್ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವಿದೆ ಎಂಬುದು ಜನರಲ್ ನರವಣೆ ಅವರ ಮಾತಿನ ಅರ್ಥವಾಗಿದೆ. ಆ
ತ್ಮ ನಿರ್ಭರ ಭಾರತ್ ಯೋಜನೆಯನ್ನು ಭಾರತೀಯ ಸೈನ್ಯ ತುರ್ತಾಗಿ ಅಳವಡಿಸಿಕೊಂಡು ಸ್ವಯಂ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಬೇಕು ಎಂದು ಜನರಲ್ ನರವಣೆ ಆಗ್ರಹಿಸಿದ್ದಾರೆ.
ಕಳ್ಳನನ್ನು ಪ್ಯಾಂಟಿನಿಂದ ಕಟ್ಟಿದ ವಿಡಿಯೋ ವೈರಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ