Belagavi NewsBelgaum NewsKannada NewsKarnataka News

ಬಿಜೆಪಿ ಮೊದಲು ತನ್ನ ಭರವಸೆ ಈಡೇರಿಸಿ, ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ – ಲಕ್ಷ್ಮೀ ಹೆಬ್ಬಾಳಕರ್

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ​ : ​ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಬಿಜೆಪಿ ನಾಯಕ​ರು​​ ಮೊದಲು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕ​ಲಿ, ಜನರಿಗೆ ಭರವಸೆ ಕೊಟ್ಟಂತೆ 2 ಕೋಟಿ ಉದ್ಯೋಗ ನೀಡಲಿ. ನಂತರ​ ಪ್ರತಿಭಟನೆ ಮಾಡಲು ಹೇಳಿ ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ​ತಿರುಗೇಟು ನೀಡಿದ್ದಾರೆ.

ಸೋಮವಾರ ​ಬೆಳಗಾವಿಯಲ್ಲಿ ಸುದ್ದಿಗಾರ​ರ ಪ್ರಶ್ನೆಗೆ ಉತ್ತರಿಸಿದ​ ಅವರು, ಕಾಂಗ್ರೆಸ್ ಸರಕಾರ ನೀಡಿದ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಹಂತ ಹಂತವಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಇದರ ನಡುವೆಯೂ ​ಬಿಜೆಪಿಯವರು ಸರಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿಕೆ ನೀ​ಡುವುದು ಸರಿಯಲ್ಲ. ಅವರಿಗೆ ಮೊದಲು ಎಲ್ಲರ ಖಾತೆಗೆ 15 ಲಕ್ಷ, ನಿರುದ್ಯೋಗ ಯುವಕರಿಗೆ ಉದ್ಯೋಗ ಕೊಟ್ಟು ಪ್ರತಿಭಟನೆ ಮಾಡಲು ಹೇಳಿ ಎಂದು ವಾಗ್ದಾಳಿ ನಡೆಸಿದರು.

ನಾವು ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೇವೆ. ನಾವು ಅಕ್ಕಿಯನ್ನು ಕೊ​ಟ್ಟೇ​​ ಕೊಡುತ್ತೇವೆ. ಯಾವ ತೊಂದರೆಯೂ ಇಲ್ಲ​,​ ಗೊಂದಲವೂ ಇಲ್ಲ ಎಂದರು.​ ಗೃಹ ಲಕ್ಷ್ಮೀ ಯೋಜನೆಯಲ್ಲಿ ಸಹ ಗೊಂದಲ ಇಲ್ಲ. ವ್ಯವಸ್ಥಿತವಾಗಿ ಎಲ್ಲವನ್ನೂ ಜಾರಿಗೊಳಿಸಲಾಗುವುದು. ಅಲ್ಲಿಯವರೆಗೆ ಸ್ವಲ್ಪ ತಾಳ್ಮೆ ಇರಲಿ ಎಂದು ವಿನಂತಿಸಿದರು.​

ಮುಂಗಾರು ಮಳೆ ವಿಳಂಬದ ​ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,​ ಮಳೆ ಶೀಘ್ರ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆ ಬಾರದಿದ್ದರೂ ಪರ್ಯಾಯ ವ್ಯವಸ್ಥ ಕುರಿತು ರಾಜ್ಯ ಸರಕಾರ ​ಸಿದ್ಧತೆ ಮಾಡಿಕೊಳ್ಳುತ್ತಿದೆ. ನೀರಿನ ಸಮಸ್ಯೆ ನಿವಾರಣೆಗೆ, ಮೋಡ ಬಿತ್ತನೆ ಕುರಿತು ಗಮನ ಹರಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ​ ಕುರಿತು ಯಾವುದೇ​​ ಚರ್ಚೆ ಇಲ್ಲ. ಕೇವಲ ಅದು ಮಾಧ್ಯಮ​ಗಳ​ಲ್ಲಿ ಮಾತ್ರ ಬರುತ್ತಿದೆ​ ಎಂದು ಅವರು ಹೇಳಿದರು.

​ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button