Belagavi NewsBelgaum NewsKannada NewsKarnataka NewsNational

*ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರಕ್ಕೆ ಎಷ್ಟು ಕಪ್ಪು ಕಾಣಿಕೆ ನೀಡಿದ್ದರು ಎಂದು ಸ್ಪಷ್ಟಪಡಿಸಲಿ: ಸಚಿವ ಚಲುವರಾಯಸ್ವಾಮಿ* 

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬಿಜೆಪಿಯವರು ಆಡಳಿತ ಮಾಡಿದಾಗ ಕೇಂದ್ರದವರಿಗೆ ಎಷ್ಟು ಕಪ್ಪು ಕಾಣಿಕೆ ನೀಡಿದ್ದರು ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು  ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬುಧವಾರ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, ಹೊಸ ಸರಕಾರ ಬಂದಾಗ ಬೆಲೆ ಏರಿಕೆ ಹೆಚ್ಚಾಗಿದೆ. 5 ರಿಂದ 10 ಪ್ರತಿಶತ ಹೆಚ್ಚಾಗುತ್ತದೆ. ಈ‌ ಹಿಂದೆ ಎನ್ ಡಿಎ ಸರಕಾರ ಇದ್ದಾಗ ಪೆಟ್ರೋಲ್, ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದರು.

ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶದ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದರು.

ಕರ್ನಾಟಕಕ್ಕೆ ಅನುದಾನ ಕೂಡ ಕೇಂದ್ರ ಸರಕಾರ ಕೊಟ್ಟಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಮ್ಮಿ ಇದೆ. ಹಾಲು ಹೆಚ್ಚು ಶೇಖರಣೆ ಆಗುತ್ತಿದ್ದು ಹೀಗಾಗಿ 50 ಎಂ.ಎಲ್. ಹೆಚ್ಚು ಮಾಡಿದ್ದೇವೆ. ಎರಡು ರೂಪಾಯಿ ಹೆಚ್ಚು ಮಾಡಿದ್ದು 50 ಎಂ.ಎಲ್ ಹೆಚ್ಚು ಮಾಡಿದ್ದೇವೆ. ರೈತರಿಗೆ ಈಗಾಗಲೇ ಐದು ರೂಪಾಯಿ ಕೊಡುತ್ತಿದ್ದೇವೆ. ಹೆಚ್ಚುವರಿ ಹಣ ಕೊಡುವುದಿಲ್ಲ. ಹಾಲು ಹೆಚ್ಚು ಉತ್ಪಾದನೆ ಆಗುತ್ತಿತ್ತು. ಅದನ್ನ ಕೊಳ್ಳಲು 50 ಎಂ.ಎಲ್. ಜಾಸ್ತಿ ಮಾಡಿದ್ದೇವೆ. ಅದಕ್ಕೆ ಎರಡು ರೂಪಾಯಿ ಪಡೆಯುತ್ತಿದ್ದೇವೆ ಎಂದರು.

ಬಿಜೆಪಿಯವರು ಐದು ವರ್ಷದ ಆಡಳಿತದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈಗ ವಿಪಕ್ಷದಲ್ಲಿ ಕುಳಿತು ವಿನಾಕಾರಣ ಆರೋಪ‌ ಮಾಡುವುದು ಬಿಜೆಪಿಯವರ ಕಸಬಾಗಿದೆ. ಕೇಂದ್ರ ಸರಕಾರ  10 ವರ್ಷದಲ್ಲಿ ಯಾವುದೇ ಭರವಸೆ ಈಡೇರಿಸಿಲ್ಲ. ಸಿಎಂ‌ ಮನೆಯ ಮುಂದೆ ಧರಣಿ ನಡೆಸುವ ಬಿಜೆಪಿಗೆ ಅದೆ ಕಾಯಕ ಎಂದರು.

ಗ್ಯಾರಂಟಿ ಯೋಜನೆಯಿಂದ ಸರಕಾರದ ಖಜಾನೆ ಖಾಲಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸರಕಾರ ಬಂದ ಮೇಲೆ ಗ್ಯಾರಂಟಿ ಕೊಟ್ಟಿದ್ದೇವೆ. ಅದನ್ನು ನಿಲ್ಲಿಸಿಲ್ಲ. ಐದು ವರ್ಷ ಬಿಜೆಪಿಯವರು ಆಡಳಿತ ನಡೆಸಲು ವಿಫಲರಾಗಿದ್ದಾರೆ. ಅದಕ್ಕಾಗಿ ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಕೇಂದ್ರ ಸರಕಾರ ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಅನುದಾನ ಕೊಡಲಿಲ್ಲ. ಸುಪ್ರೀಂ ಕೋರ್ಟ್ ಗೆ ಹೋಗಿ ನಾವು ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲಾ ಹೀಗಾಗಿ ಮಾತನಾಡುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿಗೆ ಕಾಣಿಕೆ ನೀಡಲು ದರ ಏರಿಕೆ ಎಂಬ ಅರ್. ಅಶೋಕ ಆರೋಪ ಮಾಡಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಇವರು ರಾಜ್ಯದಲ್ಲಿ ಆಡಳಿತ ಮಾಡಿದಾಗ ಎಷ್ಟು ಕೊಟ್ಟಿದ್ದಾರೆ. ಕೇಂದ್ರ ಸರಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಎಷ್ಟು ಕೊಟ್ಟಿದ್ದಾರೆ. ನಾವು ಇವರ ರೀತಿ ಮಾಡಿಲ್ಲ ಎಂದರು. ಬಿಜೆಪಿಯವರು ರಾಜ್ಯದಲ್ಲಿ ಆಡಳಿತ ಮಾಡಿದಾಗ ಕೇಂದ್ರವರಿಗೆ ಎಷ್ಟು ಕಪ್ಪು ಕಾಣಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button