
ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳು ತನ್ನ ಪ್ರಿಯಕರ ತನಗೆ ಸಿಗಲಿ ಎಂದು ದೇವರಿಗೆ ಪತ್ರ ಬರೆದಿದ್ದಾಳೆ.
ಕೋಲಾರದ ಚಿಕ್ಕ ತಿರುಪತಿ ಹುಂಡಿಯಲ್ಲಿ ಯುವತಿಯೊಬ್ಬಳು ತನ್ನ ನೆಚ್ಚಿನ ಹುಡುಗನ ಬಗ್ಗೆ ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿದ್ದು ಹುಂಡಿ ಎಣಿಕೆಯ ವೇಳೆ ಪತ್ರ ಪತ್ತೆಯಾಗಿದೆ. ಇದೀಗ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ಪತ್ರದಲ್ಲಿ ವೆಂಕಟರಮಣ ವೆಂಕಟ ಸ್ವಾಮಿ.. ತಿರುಪತಿ ತಿಮ್ಮಪ್ಪ. ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು. ಅವನು ನನ್ನ ಬಿಟ್ಟು ಇರುವಂತೆ ಆಗಬಾರದು. ಆಫೀಸ್ ನಲ್ಲಿ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು. ಆಫೀಸ್ ನಲ್ಲಿ ನನ್ನನ್ನೇ ನೋಡಬೇಕು. ಅವನ ಮೇಲೆ ನಂಗಿರೊ ಫೀಲೀಂಗ್ ಹಾಗೆ ಅವನಿಗೂ ಶೇಕಡಾ 7% ಜಾಸ್ತಿ ಫೀಲಿಂಗ್ ಇರಬೇಕು ಎಂದು ಯುವತಿ ಪತ್ರದಲ್ಲಿ ಬರೆದಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ