ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲ್ಲೂಕಿನ ನರೇಗಾ ಪ್ರಗತಿ ಕುಂಠಿತವಾಗಿದ್ದು, ಇಂದಿನಿಂದ ನಿರಂತರ ಮಾನವ ದಿನಗಳ ಸೃಜನೆಯಾಗಬೇಕೆಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ. ಎನ್. ಬಂಗಾರಪ್ಪನವರ ಸೂಚಿಸಿದರು.
ಸ್ಥಳೀಯ ತಾಲ್ಲೂಕ ಪಂಚಾಯತಿ ಸಭಾಭವನದಲ್ಲಿ ಬುಧವಾರ (ಸೆ.4) ರಂದು ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆಯು ಆಶ್ರಯ ಆಗಿದೆ ಆದ್ದರಿಂದ ಕೂಲಿ ಕಾರ್ಮಿಕರು ಉದ್ಯೋಗ ಕೇಳದ ತಕ್ಷಣ ಉದ್ಯೋಗ ನೀಡಬೇಕು. ಕೂಲಿಕಾರ್ಮಿಕರಿಗೆ ಅನುಗುಣವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ಸ್ಥಳಗಳನ್ನು ಗುತಿಸಿ ಪ್ರತಿ ದಿನವು ಮಾನವ ದಿನಗಳ ಸೃಜನೆಯಾಗಬೇಕು. ಮಾನವ ದಿನಗಳ ಸೃಜನೆ ಪ್ರಗತಿಯಾಗದಿದ್ದರೆ ಸಂಬಂದಿಸಿದ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕ್ರಮೇಣವಾಗಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆಗಳು ಪ್ರಾರಂಭ ಇರಬೇಕು. ಮಕ್ಕಳ ಹಾಜರಾತಿ ಹೆಚ್ಚಾಗುವಂತೆ ಕ್ರಮ ವಹಿಸಬೇಕು. ನರೇಗಾ, ಜಲ ಜೀವನ್ ಬೌತಿಕ ಹಾಗೂ ಆರ್ಥಿಕ ಪ್ರಗತಿ, ಸ್ವಚ್ಚ ಭಾರತ ಮಿಷನ್ ಸೇರಿದಂತೆ ಇತರೆ ಎಲ್ಲ ಯೋಜನೆಗಳ ಪ್ರತಿಯಲ್ಲಿ ಇರುವಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ, ತಾಲ್ಲೂಕಾ ಯೋಜನಾಧಿಕಾರಿಗಳಾದ ಎನ್. ಎಸ್. ಹೂಗಾರ ಸೇರಿದಂತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ