*ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಮಾಡದೆ ರಾಜೀನಾಮೆ ನೀಡಲಿ: ಯತ್ನಾಳ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಿಲ್ಲರೆ ರಾಜಕಾರಣಿಗಳ ರೀತಿ ನೀವು ಮಾಡದೇ ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣ ಸಂಬಂಧ ನ್ಯಾಯಾಲಯದ ಆದೇಶದಂತೆ ಇಂದು ಸಿಎಂ ವಿರುದ್ಧ FIR ದಾಖಲಾಗಿದ್ದು, ಈ ಬಗ್ಗೆ ಬೈಲಹೊಂಗಲದಲ್ಲಿ ಪ್ರತಿಕ್ರಿಯೆ ನೀಡಿರುವ ಯತ್ನಾಳ್, ಸಿದ್ದರಾಮಯ್ಯ ಅವರೇ.. ನಿಮ್ಮ ಸುತ್ತಮುತ್ತಲಿನ ಪಟಾಲಂನಿಂದ ನಿಮಗೆ ತಪ್ಪು ಸಲಹೆ ನೀಡಲಾಗಿದೆ. ನಿಮ್ಮ ಹೆಸರು ಉಳಿಯಬೇಕು ಎಂದಾದರೆ ನೀವು ರಾಜೀನಾಮೆ ಕೊಡಿ ಎಂದು ಯತ್ನಾಳ್ ಪುನರುಚ್ಚರಿಸಿದರು.
ಕಾಂಗ್ರೆಸ್‌ನಲ್ಲಿರುವವರೇ ಸಿದ್ದರಾಮಯ್ಯರನ್ನು ಬಲಿಪಶು ಮಾಡಿದ್ದಾರೆಂದು ಆರೋಪಿಸಿರುವ ಯತ್ನಾಳ್, ನ್ಯಾಯಾಂಗ ವ್ಯವಸ್ಥೆ ಏನು ನಿರ್ದೇಶನ ಕೊಡಬೇಕು ಅದು ಕೊಟ್ಟಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ A1 ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ತನಿಖೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಆಗಬೇಕು. ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ಕೊಡಬೇಕು. ಮತ್ತೆ ಕೋರ್ಟ್ ತೀರ್ಪು ಬಂದ ಬಳಿಕ ನೀವೇ ಮತ್ತೊಮ್ಮೆ ಸಿಎಂ ಆಗಬಹುದು. ನಿಮಗೆ ಒಳ್ಳೆಯ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ