Latest

ಕರ್ನಾಟಕದ ಯುವಜನ ಒಲಿಂಪಿಕ್ ನಲ್ಲಿ ಸಾಧನೆ ಮಾಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಪ್ರಗತಿವಾಹಿನಿ ಸುದ್ದಿ, ಹಾವೇರಿ: “ಕರ್ನಾಟಕದ ಯುವಜನರು ಒಲಿಂಪಿಕ್ ನಲ್ಲೂ ಸಾಧನೆಗೈದು ಪದಕ ಗಳಿಸುವಂತಾಗಬೇಕು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಹಾವೇರಿ ಜಿಲ್ಲೆಯ ಸವಣೂರಿ‌ಲ್ಲಿ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

“ಕಬ್ಬಡ್ಡಿ ಆಟದಲ್ಲಿ ವಿವಿಧ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಸೇರಿದಂತೆ ಮಹಿಳೆಯರ 18 ತಂಡಗಳು, ಪುರುಷರ ತಂಡಗಳಿವೆ. ಇಂತಹ ಕಬ್ಬಡಿ ಪಂದ್ಯ ಆಯೋಜಿಸಿದ್ದು ಒಂದು ದಾಖಲೆ. ಕಬ್ಬಡಿ ನಮ್ಮ ದೇಶಿ ಆಟವಾಗಿದೆ. ಕ್ರಿಕೆಟ್, ಹಾಕಿ ಆಡುವುದಕ್ಕೆ ಅಪಾರ ಹಣ ಬೇಕು. ಕಬಡ್ಡಿಗೆ ಒಂದು ಗೆರೆ ಸಾಕು” ಎಂದು ಸಿಎಂ ಹೇಳಿದರು.

“ನಾನು ಮುಖ್ಯಮಂತ್ರಿಯಾದ ಮೇಲೆ ಗ್ರಾಪಂ, ತಾಪಂ, ಜಿಪಂ ಮಟ್ಟದಲ್ಲಿ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿದ್ದೇನೆ. ಈ ವರ್ಷ ಖೇಲೋ ಇಂಡಿಯಾ, ಯುವ ಜನೋತ್ಸವ ಕರ್ನಾಟಕದಲ್ಲಿ ಆಯೋಜಿಸಿದ್ದೇವೆ. ನನ್ನ ಕ್ಷೇತ್ರದಲ್ಲಿ ರಾಷ್ಟ ಮಟ್ಟದ ಕುಸ್ತಿ ಹಾಗೂ ಕಬಡ್ಡಿ ಆಟ ಆಯೋಜನೆ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಬಂಕಾಪುರದಲ್ಲಿ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗುವುದು” ಎಂದರು.

“ಖೇಲೋ ಇಂಡಿಯಾ, ನಂತರ ಜೀತೋ ಇಂಡಿಯಾ ಎಂದು ಮೋದಿಯವರು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅತೀ ಹೆಚ್ಚು ಒಲಿಂಪಿಕ್ ಪದಕ ಬಂದಿದೆ. ಸಾಕಷ್ಟು ಪ್ರೋತ್ಸಾಹ, ಸೌಲಭ್ಯ, ತರಬೇತಿಗಳಿಂದ ಉತ್ತಮ ಯುವಕ- ಯುವತಿಯರನ್ನು ಕ್ರೀಡಾ ಕ್ಷೇತ್ರದಲ್ಲಿ ತಯಾರು ಮಾಡಬಹುದು. 75 ಕ್ರೀಡಾಪಟುಗಳನ್ನು ನಾವು ದತ್ತು ಪಡೆದು ಪ್ರತಿಯೊಬ್ಬರಿಗೆ 8 ಲಕ್ಷ ರೂ. ವೆಚ್ಚದಲ್ಲಿ ಒಲಂಪಿಕ್ ಗೆ ತರಬೇತಿ ನೀಡುತ್ತಿದ್ದೇವೆ” ಎಂದು ಬೊಮ್ಮಾಯಿ ಹೇಳಿದರು.

https://pragati.taskdun.com/vinay-kulkarnirecationpanchamasali-2d-reservationbelagavi/
https://pragati.taskdun.com/300-jds-workersresigngubbimla-s-r-shrinivas/
https://pragati.taskdun.com/cm-basavaraj-bommaireactionreservation/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button