*ಚಳಿಗಾಲದ ಅಧಿವೇಶನದಲ್ಲಿ ಏನು ಆಗುತ್ತೆ ಕಾದು ನೋಡಿ: ಸಂಸದ ಬಿ.ವೈ ರಾಘವೇಂದ್ರ ಸ್ಪೋಟಕ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ :ಕಾಂಗ್ರೇಸ್ ಗ್ಯಾರಂಟಿಗಳಿಂದ ಬಚಾವ್ ಆಗಲು ಸಿಎಂ ಸಿದ್ದರಾಮಯ್ಯ ಸಂಚು ರೂಪಿಸುತ್ತಿರುವುದು ನಿಜಾನಾ ? ಯಾಕಂದ್ರೆ ಈಗ ರಾಜ್ಯದಲ್ಲಿ ಆಗುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಬಿಜೆಪಿ ಅಪಸ್ವರ ಶುರುವಾಗಿದೆ. ಮೋದಿ ಋಣದಲ್ಲಿ ತಮ್ಮ ಹೆಸರನ್ನು ಮಾಡಿಕೊಳ್ಳಲು ರಾಜ್ಯ ಕಾಂಗ್ರೇಸ್ ಸರ್ಕಾರ ನಿಂತಿದೆ ಎಂದು ಆರೋಪಿಸಿದೆ. ಬಿಪಿಎಲ್ ಕಾರ್ಡ್ ರದ್ದು ವಿಚಾರ ಸಾವರ್ಜನಿಕ ವಲಯದಲ್ಲಿ ಆತಂಕ ಸೃಷ್ಟಿ ಮಾಡಿದ್ದು, ಈ ವಿಚಾರವಾಗಿ ಬಿಜೆಪಿ ಸಂಸದ ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ ಕಾಂಗ್ರೆಸ್ ಸರ್ಕಾರಕ್ಕೆ ಜನರು 2\3 ಮೆಜಾರಿಟಿ ಕೊಟ್ಟಿದ್ದಾರೆ. ಇವರಲ್ಲಿ 137 ಜನರಿದ್ದು ಒಳ್ಳೇಯ ಅಭಿವೃದ್ಧಿ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ದಸರಾ, ಗಣೇಶ ದೀಪಾವಳಿ ಹಬ್ಬದಂತೆ ಒಂದೊಂದೆ ಭ್ರಷ್ಟಾಚಾರ ಹಗರಣಗಳು ಹೊರ ಬರುತ್ತಿವೆ, ಈ ಗಡಿಬಿಡಿಯಲ್ಲಿ ಹಗರಣಗಳನ್ನು ಮುಚ್ಚಿ ಹಾಕಲು ಬಿಪಿಎಲ್ ಕಾರ್ಡ್ ರದ್ದು ಮಾಡ್ತಾ ಇದ್ದಾರೆ. ಇವರಿಗೆ ಕೊಟ್ಟ ಗ್ಯಾರಂಟಿಯನ್ನು ಪೂರೈಸೋಕೆ ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೆ ಆಗುತ್ತಿಲ್ಲ. ಅದಕ್ಕೆ ಕಾರ್ಡ್ ಕ್ಯಾನ್ಸಲ್ ಮಾಡಿ ಗ್ಯಾರಂಟಿ ಕೊಡೋ ಕೆಲಸ ಮಾಡ್ತಾ ಇದ್ದಾರೆ. ಇಂತಹ ದುಸ್ಥಿಗೆ ಸರ್ಕಾರ ಬಂದಿದೆ. ಇದರಿಂದ ಬಡವರಿಗೆ ಅನ್ಯಾಯ ಆಗ್ತಾ ಇದೆ ಇದರ ವಿರುದ್ಧ ನಾವು ಹೋರಾಟ ಮಾಡ್ತೀವಿ ಎಂದು ಹೇಳಿದ್ದಾರೆ.
ಜೊತೆಗೆ ಕೋಟಿ ಮೊತ್ತದ ಆಫರ್ ವಿಚಾರವಾಗಿ ಮಾತನಾಡಿದ ಅವರು, ನಮಗೆ ಆಪರೇಶನ್ ಕಮಲ ಮಾಡಿ ಅಧಿಕಾರಕ್ಕೆ ಬರುವ ಅವಶ್ಯಕತೆ ಇಲ್ಲ. ಅವರ ಮೇಲೆ ಭ್ರಷ್ಟಾಚಾರ, ಕಪ್ಪು ಚುಕ್ಕೆಗಳು ಇದೆ. ಅವರಲ್ಲಿ ಆಂತರಿಕ ರಾಜಕೀಯ ಕಚ್ಚಾಟ ನಡೀತಾ ಇದೆ. ಶಾಸಕರು ತಮ್ಮ ಪರ ಇದ್ದಾರೆ . ಸಿದ್ದರಾಮಯ್ಯ ಮುಟ್ಟಿದ್ರೆ ಸರ್ಕಾರ ಉಳಿಯಲ್ಲ ಅನ್ನೋ ಸಂದೇಶ ಡಿ.ಕೆ ಶಿವಕುಮಾರ್ ಗೆ ಕೊಡೊಕೆ ಈ ರೀತಿ ಸುಳ್ಳು ಆರೋಪ ಮಾಡ್ತಾ ಇದ್ದಾರೆ ಎಂದಿದ್ದಾರೆ.
ಅಲ್ದೇ,ಮುಡಾ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಡವರಿಗೆ ಸೈಟ್ ಸಿಗದೆ ಇರೋ ಟೈಮ್ ನಲ್ಲಿ ಅವರಿಗೆ ಸೈಟ್ ಸಿಗುತ್ತೆ. ವಕ್ಫ್ ಆಸ್ತಿಯನ್ನ ಯಾರು ನುಂಗಿದ್ದಾರೆ ಅನ್ನೋದು ಅಧಿವೇಶನದಲ್ಲಿ ಹೊರ ಬಂದೇಬಿಡುತ್ತೆ. ನಮ್ಮಲ್ಲಿ ಅನ್ವರ್ ಮಾರ್ಪಾಡಿ ಅನ್ನೋರು ತನಿಖೆ ಮಾಡಿದ್ದಾರೆ . ಅವರ ಈ ವಿಚಾರದ ಬಗ್ಗೆ ಉತ್ತಮ ತನಿಖೆ ಮಾಡಿದ್ದಾರೆ. ಸದ್ಯದಲ್ಲೆ ಎಲ್ಲಾ ಹೊರ ಬರುತ್ತೆ ಎಂದು ಕಾಂಗ್ರೇಸ್ ವಿರುದ್ದ ಚಾಟಿ ಬೀಸಿದ್ದಾರೆ.
ಹಾಗೆ, ಕೋವಿಡ್ ಸಮಯದಲ್ಲಿ ಜನರ ಜೀವ ಉಳಿಸುವ ಬಿಜೆಪಿ ಸರ್ಕಾರ ಸಾಕಷ್ಟು ಕೆಲಸ ಮಾಡ್ತು. ಹಡಗಿನಲ್ಲಿ, ಎಲ್ಲಂದರಲ್ಲಿ ಆಕ್ಸಿಜನ್ ತಂದು ಜನರ ಜೀವ ಉಳಿಸುವ ಕೆಲಸ ಮಾಡಲಾಗಿದೆ. ಯಾರು ಪಿಪಿಇ ಕಿಟ್ ಇಲ್ಲದೆ ಕೆಲಸ ಮಾಡದೆ ಇರೋ ಸಂದರ್ಭದಲ್ಲಿ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸಲಾಗಿದೆ. ಇಂತಹ ವಿಚಾರದಲ್ಲಿ ಇಲ್ಲಸಲ್ಲದ ಆರೋಪವನ್ನ ಮಾಡ್ತಾ ಇದ್ದಾರೆ. ಜನರ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಲಾಗ್ತಾ ಇದೆ. ಯಡಿಯೂರಪ್ಪ ಬೆದರಿಸಲು ಅಲ್ಲ.. ವಿಜಯೇಂದ್ರ ಉತ್ತಮ ನಾಯಕರಾಗಿ ಬೆಳಿತಾ ಇದ್ದಾರೆ. ಅದಕ್ಕೂ ಮೂಗುದಾರ ಹಾಕಬೇಕು ಅಂತ ಕಾನೂ ಚೌಕಟ್ಟಿನಲ್ಲಿರೋ ಕಾನೂನು ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ತಾ ಇದ್ದಾರೆ. ಧಮಕಿ ಹಾಕಲು ಕಾನೂನು ದುರಪಯೋಗ ಪಡಿಸಿಕೊಂಡು ಈ ರೀತಿ ಮಾಡಲಾಗ್ತಾ ಇದೆ, ವಕ್ಫ್ ಹೋರಾಟ ವಿಚಾರದಲ್ಲಿ ಎರಡು ಟೀಮ್ ಇಲ್ಲ. ಎರಡಲ್ಲ ಹತ್ತು ಟೀಮ್ ಆಗಿ ಹೋರಾಟ ಮಾಡಿದ್ರು ಪರವಾಗಿಲ್ಲ. ಮನ್ ಮೋಹನಸಿಂಗ್ ಸರ್ಕಾರದಲ್ಲಿ ವಕ್ಫ್ ಟ್ರಿಬ್ಯೂನಲ್ ಮಾಡಲಾಗಿದೆ. ವಕ್ಫ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡೋಕೆ ಬರಲ್ಲ. ನಾವು ಇದರ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡ್ತೀವಿ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ