*ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ*
ಪ್ರಗತಿವಾಹಿನಿ ಸುದ್ದಿ: ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತೀಯ ಸೇನೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಸಿ ಪಾಂಡೆ ಅವರ ಅಧಿಕಾರಾವಧಿ ಜೂ.30 ಮ ರಂದು ಮುಗಿಯಲಿದೆ.
ಉಪೇಂದ್ರ ದ್ವಿವೇದಿ ಅವರು ಪ್ರಸ್ತುತ ಭಾರತೀಯ ಸೇನೆಯ ಉಪಮುಖ್ಯಸ್ಥರಾಗಿದ್ದಾರೆ. ಅವರ ಸೇವಾ ಹಿರಿತನ ಆಧರಿಸಿ ಮುಖ್ಯಸ್ಥರ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇವರು ಜುಲೈ 01, 1964 ರಂದು ಜನಿಸಿದ್ದಾರೆ. 1984 ರಲ್ಲಿ ಭಾರತೀಯ ಸೇನೆಯ ಪದಾತಿ ದಳಕ್ಕೆ (ಜಮ್ಮು ಮತ್ತು ಕಾಶ್ಮೀರ ರೈಫಲ್ಸ್) ನೇಮಕಗೊಂಡರು. ಸುಮಾರು 40 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.
ದ್ವಿವೇದಿಯವರು ಸೇನಾ ಸಿಬ್ಬಂದಿ ವೈಸ್ ಚೀಫ್ ಆಗಿ ನೇಮಕಗೊಳ್ಳುವ ಮೊದಲು, 2022-2024 ರಿಂದ ಡೈರೆಕ್ಟರ್ ಜನರಲ್ ಇನ್‌ಫಾಂಟ್ರಿ ಮತ್ತು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಹೆಡ್‌ಕ್ವಾರ್ಟರ್ ನಾರ್ದರ್ನ್ ಕಮಾಂಡ್) ಸೇರಿದಂತೆ ಪ್ರಮುಖ ಜವಾಬ್ದಾರಿತ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಸೈನಿಕ್ ಸ್ಕೂಲ್ ರೇವಾ, ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಯುಎಸ್ ಆರ್ಮಿ ವಾರ್ ಕಾಲೇಜ್‌ನ ಹಳೆಯ ವಿದ್ಯಾರ್ಥಿಯಾಗಿರುವ ದ್ವಿವೇದಿ ಅವರು, ಡಿಎಸ್‌ಎಸ್‌ಸಿ ವೆಲ್ಲಿಂಗ್‌ಟನ್ ಮತ್ತು ಆರ್ಮಿ ವಾರ್ ಕಾಲೇಜ್, ಮೊವ್‌ನಲ್ಲಿ ಸಹ ಅಧ್ಯಯನ ಮಾಡಿದ್ದಾರೆ. ಹೆಚ್ಚುವರಿಯಾಗಿ ಅವರು ಡಿಫೆನ್ಸ್ ಮತ್ತು ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಎಂಫಿಲ್ ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್ನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ