Cancer Hospital 2
Beereshwara 36
LaxmiTai 5

*ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ*

Anvekar 3

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಹನುಮಂತ ಮಾಗುಂಡಪ್ಪ ಹುಲಸಗೇರಿ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಬಾದಾಮಿಯ ನಂದಿಕೇಶ್ವರ ಗ್ರಾಮದ ಈತ 2019ರ ಮೇ 17ರಂದು ಗ್ರಾಮದಲ್ಲಿ ದ್ಯಾಮವ್ವ ದೇವಿಯ ಉಡಿತುಂಬುವ ಕಾರ್ಯಕ್ರಮವಿದ್ದಾಗ, ಗ್ರಾಮದ ಮನೆಯೊಂದರಲ್ಲಿ ಬುದ್ಧಿಮಾಂದ್ಯ ಮಹಿಳೆಯೊಬ್ಬಳೇ ಇರುವುದನ್ನು ನೋಡಿ ಅಕ್ರಮವಾಗಿ ಮನೆಗೆ ಪ್ರವೇಶಿಸಿದ ಈತ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ.

ತಪ್ಪಿಸಿಕೊಂಡು ಪರಾರಿಯಾಗುವಾಗ ಸಂತ್ರಸ್ತೆಯ ತಲೆಗೆ ಹೊಡೆದು, ಮನೆಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಮಹಿಳೆ ಮೇಲಿನ ಗಾಯ, ಹಲ್ಲಿನಿಂದ ಕಚ್ಚಿದ ಗುರುತು ಹಾಗೂ ಆರೋಪಿ ಹಲ್ಲಿನ ಗುರುತನ್ನು ಬೆರಳಚ್ಚು ತಜ್ಞರು ಪರಿಶೀಲಿಸಿ ತನಿಖೆ ನಡೆಸಿದಾಗ ಹನುಮಂತ ಮಾಗುಂಡಪ್ಪನೇ ಈ ಕೃತ್ಯವೆಸಗಿರುವುದು ಎಂಬುದು ಗೊತ್ತಾಗಿತ್ತು. ಅಲ್ಲದೇ ವೈದ್ಯಕೀಯ ಪರೀಕ್ಷೆಯಲ್ಲಿಯೂ ಅಪರಾಧಿ ಬಗ್ಗೆ ಖಚಿತವಾಗಿತ್ತು.

Emergency Service

ಪ್ರಕರಣದ ತನಿಖೆ ನಡೆಸಿದ್ದ ಸಿಪಿಐ ಆರ್.ಹೆಚ್.ಹಾನಾಪೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಾಬೋತಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ.ವಿಜಯ, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 42 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.


Bottom Add3
Bottom Ad 2