ಪ್ರತ್ಯೇಕ ಪ್ರಕರಣಗಳಲ್ಲಿ ಮಲ್ಪೆ ಸಮುದ್ರದಲ್ಲಿ ಮುಳುಗುತ್ತಿದ್ದ 6 ಜನರ ರಕ್ಷಣೆ; ಓರ್ವ ಸಾವು, ಇನ್ನೋರ್ವ ಗಂಭೀರ
ಪ್ರಗತಿವಾಹಿನಿ ಸುದ್ದಿ, ಉಡುಪಿ : ಮಲ್ಪೆ ಬೀಚ್‌ನ ಸಮುದ್ರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮುಳುಗಿ ಸಾವಿನ ದವಡೆಗೆ ಸಿಲುಕುತ್ತಿದ್ದ 6 ಜನ ಪ್ರವಾಸಿಗರನ್ನು ಸ್ಥಳೀಯ ಜೀವರಕ್ಷಕರು ರಕ್ಷಿಸುವ ಪ್ರಯತ್ನ ಮಾಡಿದ್ದು ಪೈಕಿ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿರುವ ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ.
ದಸರಾ ರಜೆ ನಿಮಿತ್ತ ಮೈಸೂರು ಮೂಲದ ತೌಸಿಫ್ ಮಂಗಳವಾರ ಮಲ್ಪೆ ಬೀಚ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಜೀವರಕ್ಷಕರು ಬಹಳ ಕಷ್ಟಪಟ್ಟು ರಕ್ಷಿಸಿದ್ದಾರೆ.
ಕುಟುಂಬ ಸಮೇತ ಬೀಚ್‌ಗೆ ಭೇಟಿ ನೀಡಿದ್ದ ತಮಿಳುನಾಡಿನ ಸೇಲಂ ಮೂಲದ ಸೆಂಥಿಲ್ ಮತ್ತು ಬಿಜಿಪುರ ಮೂಲದ ಬಸವರಾಜು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜೀವರಕ್ಷಕರು ರಕ್ಷಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ನವಾಜ್ ಎಂಬಾತ ಪಾನಮತ್ತನಾಗಿ ಸಮುದ್ರದಲ್ಲಿ ಈಜುತ್ತಿದ್ದು, ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಜೀವರಕ್ಷಕರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ರಕ್ಷಿಸಿದ್ದಾರೆ.
ತನ್ನ ಸ್ನೇಹಿತರೊಂದಿಗೆ ಈಜುತ್ತಿದ್ದ ಸೋಹಮ್ ಘೋಷ್ ಎಂಬುವವರೂ ಸಮುದ್ರದ ಅಲೆಯಲ್ಲಿ ಸಿಲುಕಿದ್ದು, ಅವರನ್ನೂ ಜೀವರಕ್ಷಕರು ರಕ್ಷಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬೆಂಗಳೂರಿನ ಸಲಾಮ್ ಚೆರ್ರಿ ಮತ್ತು ಮೈಸೂರಿನ ಅಬ್ರಾರ್ ಈಜಲು ಹೋಗಿದ್ದರು, ಜೀವರಕ್ಷಕರು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ ನಂತರವೂ. ಸಂಜೆ ಇವರು ನೀರಿಗಿಳಿದಿದ್ದು ಅಪಾಯದ ಹಂತದಲ್ಲಿದ್ದಾಗಲೇ ಅವರನ್ನು ದಡಕ್ಕೆ ತರಲಾಯಿತು.
ಈ ಪೈಕಿ ಸಲಾಮ್ ಚೆರ್ರಿ ಅವರನ್ನು ತಕ್ಷಣವೇ ರಕ್ಷಿಸಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಅಬ್ರಾರ್ ಅಹ್ಮದ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಶ್ವಾಸಕೋಶದ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.
ಸೇನಾ ಹೆಲಿಕಾಪ್ಟರ್ ಪತನ; ಪೈಲಟ್ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ