Kannada NewsKarnataka News

ಕ್ಯಾಂಡಲ್ ಲೈಟ್ ಬೆಳಗಿ, ಮೌನಾಚರಣೆ ಮೂಲಕ ಉಮೇಶ ಕತ್ತಿಗೆ ಕಲ್ಪವೃಕ್ಷ ಶದ್ಧಾಂಜಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿರುವ ರಾಜ್ಯ ಅರಣ್ಯ ಮತ್ತು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರಿಗೆ ಇಲ್ಲಿಯ ಕಲ್ಪವೃಕ್ಷ ಮಹಿಳಾ ಮಂಡಳ ಶೃದ್ಧಾಂಜಲಿ ಸಲ್ಲಿಸಿತು.

ಚನ್ನಮ್ಮ ವೃತ್ತದಲ್ಲಿ ಬುಧವಾರ ಸಂಜೆ ಸೇರಿದ್ದ ಮಹಿಳೆಯರು ಮೊಂಬತ್ತಿ ಬೆಳಗಿ, ಮೌನಾಚರಣೆ ಮಾಡಿ ಶೃದ್ಧಾಂಜಲಿ ಸಲ್ಲಿಸಿದರು.

ಉಮೇಶ ಕತ್ತಿ ರಾಜ್ಯಕ್ಕೆ, ಉತ್ತರ ಕರ್ನಾಟಕಕ್ಕೆ, ಬೆಳಗಾವಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬಡವರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಸಾವಿನಿಂದ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಲ್ಪವೃಕ್ಷ ಮಹಿಳಾ ಮಂಡಳದ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಹೇಳಿದರು.

ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿರುವ ಉಮೇಶ ಕತ್ತಿ, ಲಕ್ಷಾಂತರ ಕುಟುಂಬಗಳಿಗೆ ಅನ್ನ ನೀಡಿದ್ದಾರೆ. ಅವರ ಅಕಾಲಿಕ ಸಾವು ನಮಗೆಲ್ಲ ದಿಗ್ಭ್ರಮೆ ಉಂಟು ಮಾಡಿದೆ ಎಂದು ಅವರು ಹೇಳಿದರು.

Home add -Advt

ಸಾಮ್ರಾಜ್ಯ ಕಟ್ಟಿ ಮರೆಯಾದ ಉಮೇಶ ಕತ್ತಿ; ಪ್ರಕೃತಿಯೊಂದಿಗೆ ಲೀನರಾದ ಸಾಹುಕಾರ

 

https://pragati.taskdun.com/politics/umesh-katthi-who-built-the-empire-and-disappeared/

https://pragati.taskdun.com/latest/umesh-kattifuneralbellada-bagewadibelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button