Belagavi NewsBelgaum NewsCrimeKannada News

*ಗ್ರಾಮೀಣ ಪೋಲೀಸರಿಂದ ಮಿಂಚಿನ ದಾಳಿ: ಜೂಜು ಆಡುತ್ತಿದ್ದ 10 ಜನರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಳಿ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿರುವ ಬೆಳಗಾವಿ ಗ್ರಾಮೀಣ ಪೊಲೀಸರು 10 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ದಾಳಿಯಲ್ಲಿ ಸಂತೋಷ ಚಾಂದಮಲ್ಲ, ಸುರೇಶ ಪರಶುರಾಮ ಅನಗೋಳ್ಳರ, ಬಾಬು ರಾಮಪ್ಪಾ ದೊಡಮನಿ, ಬಸವರಾಜ ಭೀಮರಾವ ಶೀಗಿಹಳ್ಳಿ, ಹಿದಾಯತುಲ್ಲಾ ಅಸಿಮ್ ಮಕಾಂದಾರ, ಆನಂದ ಭರಮಕುಮಾರ ಕಸ್ತುರಿ, ತೊಪಿಕ ಮಹಮ್ಮದಗೌಸ್ ಪಾಕೀರ, ಅಲಿಸಾಬ ಅನ್ವರ ಮಸನಕಟ್ಟಿ, ಮಲಿಕ್ ನಿಜಾಮಸಾಬ್ ಗುಡಾವಲೆ ಹಾಗೂ ತವನಪ್ಪಾ ಪದ್ಮಪ್ಪಾ ಬೆನ್ನಾಳಿ ಎಂಬಾತರನ್ನು ಬಂಧಿಸಲಾಗಿದೆ.

ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ

ಸಂತೋಷ ದಳವಾಯಿ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ದಾಳಿಯಲ್ಲಿ ಆರೋಪಿಗಳಿಂದ 53,600 ರೂ ನಗದು ಹಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Home add -Advt

ಅಲ್ಲದೇ ಆರೋಪಿ ನಂ 11 &12 ಗಳಾದ ಹಾಗೂ ಪ್ರಫುಲ್ ಪಾಟೀಲ ಹಾಗೂ ಸಂಜಯ ನಾಯಕ @ ಕೆ ಕೆ ಸಂಜು ಇವರು ತಮ್ಮ ಸ್ವಂತ ಲಾಭಕ್ಕಾಗಿ ಆಟ ಆಡಲು ಅನುವು ಮಾಡಿದಕ್ಕಾಗಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ. ಸಂಖ್ಯೆ. 213/2025 ಕಲಂ. 87 ಕೆ.ಪಿ. ಆಕ್ಷ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

Related Articles

Back to top button