ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಕೊರೋನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಎಲ್ಲೆಡೆ ಆಕ್ಸಿಚೆನ್ ಕೊರತೆ ತೀವ್ರವಾಗಿದೆ. ಕಾಳಸಂತೆಯಲ್ಲಿ ಎಷ್ಟೋಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ಈ ಸಂದರ್ಭದಲ್ಲಿ, ಲಿಂಬೆ ರಸ ಆಕ್ಸಿಜೆನ್ ಕೊರತೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂದು ವಿಆರ್ ಎಲ್ ಸಮೂಹದ ಮುಖ್ಯಸ್ಥ, ಮಾಜಿ ಸಂಸದ ಡಾ.ವಿಜಯ ಸಂಕೇಶ್ವರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಬೆರಸ ಆಕ್ಸಿಜೆನ್ ಕೊರತೆಯಿಂದ ಬಳಲುತ್ತಿರುವವರನ್ನು ಪಾರುಮಾಡುತ್ತದೆ ಎಂದು ಎಲ್ಲೋ ಕೇಳಿದ್ದೆ. ಅದೇ ಪ್ರಕಾರ ನಾನು ಕಳೆದ 3 -4 ದಿನದಲ್ಲಿ ಹಲವರಿಗೆ ಸಲಹೆ ನೀಡಿದ್ದೆ. ಅವರೆಲ್ಲರಿಗೂ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರಿದೆ ಎಂದಿದ್ದಾರೆ.
ಆಕ್ಸಿಜೆನ್ ಪ್ರಮಾಣ 83 -84 ಇದ್ದವರೆಲ್ಲ ಲಿಂಬೆರಸವನ್ನು ಮೂಗಿನೊಳಗೆ ಬಿಟ್ಟುಕೊಂಡ ಅರ್ಧಗಂಟೆಯೊಳಗೆ 95 -96ರಷ್ಟು ಪಡೆದಿದ್ದಾರೆ. ಕಫಗಳೆಲ್ಲ ಕರಗಿ ತಕ್ಷಣ ಪರಿಣಾಮ ಉಂಟಾಗುತ್ತದೆ ಎಂದು ವಿಜಯ ಸಂಕೇಶ್ವರ ಹೇಳಿದರು.
ಮೇ 4ರ ವರೆಗೆ ಲಾಕ್ ಡೌನ್ ಬಹುತೇಕ ಫಿಕ್ಸ್
ಕೊರೋನಾ ಬಂದವರ ಆಹಾರ ಹೇಗಿರಬೇಕು: ಇಲ್ಲಿದೆ ಬೆಳಗಾವಿ ಡಾಕ್ಟರ್ ಟಿಪ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ