ಕೆಎಲ್‍ಇ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ನೆರೆ ಸಂತ್ರಸ್ತರಿಗೆ ನೆರವು
ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಯಿತು.
ಪ್ರಗತಿವಾಹಿನಿ ಸದ್ದಿ – ಬೆಳಗಾವಿ : ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ತಾಲೂಕುಗಳು ಪ್ರವಾಹಕ್ಕೀಡಾಗಿದ್ದು ದುರಂತದ ಸಂಗತಿ. ಲಕ್ಷಾಂತರ ಜನರು ಮನೆಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ ಬಂದಿದ್ದಾರೆ. ಅವರಿಗೆ ನೆರವಿನ ಹಸ್ತ ನೀಡುವ ನಿಟ್ಟಿನಲ್ಲಿ ಕೆಎಲ್‍ಇ ಸಂಸ್ಥೆಯ ಲಿಂಗರಾಜ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಸಿಬ್ಬಂದಿವರ್ಗದವರು ಹುಕ್ಕೇರಿ ತಾಲೂಕಿನ ಕಾಟಾಬಳಿ, ಬೆಳಗಾವಿ ತಾಲೂಕಿನ ವಂಟಮುರಿ, ಭೂತ್ರಾಮನಟ್ಟಿ ಹಾಗೂ ಕಣಬರ್ಗಿಯ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ 50ಕ್ಕೂ ಹೆಚ್ಚು ಕುಟುಂಬಗಳಿಗೆ ಬೆಡ್ ಸೀಟ್, ಚಾದರ್, ಕುಡಿಯುವ ನೀರಿನ ಬಾಟಲಿಗಳು, ಬಟ್ಟೆಗಳು, ಆಹಾರ ಸಾಮಗ್ರಿಗಳನ್ನು ನೀಡಿದರು.
ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ, ಪದವಿಪೂರ್ವ ಪ್ರಾಚಾರ್ಯ ಪ್ರೊ.ಗಿರಿಜಾ ಹಿರೇಮಠ, ಎನ್‍ಎಸ್‍ಎಸ್ ನೂಡಲ್ ಅಧಿಕಾರಿ ಪ್ರೊ.ಎಸ್.ಎನ್.ಮೂಲಿಮನಿ, ಎನ್‍ಎಸ್.ಎಸ್. ಅಧಿಕಾರಿ ಡಾ. ಎಚ್.ಎಂ.ಚನ್ನಪ್ಪಗೋಳ, ದೈಹಿಕ ನಿರ್ದೇಶಕರಾದ ಸಿ.ರಾಮರಾವ್, ಎನ್‍ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ, ಪ್ರೊ. ಗುರಯ್ಯಾ ಮಠಪತಿ, ಪ್ರೊ.ಲಕ್ಷ್ಮೀ ಬಿರಾದಾರ, ಪ್ರೊ. ವಿನಾಯಕ ವರೂಟೆ, ಪ್ರೊ.ಸುಮಿತ ಮೂಡಲಗಿ ಹಾಗೂ ಸಿಬ್ಬಂದಿ ಮತ್ತು ಲಿಂಗರಾಜ ಕಾಲೇಜಿನ ಎನ್‍ಸಿಸಿ, ಎನ್‍ಎಸ್‍ಎಸ್, ರೆಡ್ ಕ್ರಾಸ್, ಕ್ರೀಡಾ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಿರಾಶ್ರಿತರಿಗೆ ಅಗತ್ಯ ವಸ್ತು ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ