ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮ ಶ್ರೀಗಳ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಲಿಂಗಾಯತ ಪಂಚಮಸಾಲಿ ಮತ್ತು ಇತರೆ ಉಪ ಪಂಗಡಗಳಿಗೆ 2 ಅ ಮೀಸಲಾತಿ ಕಲ್ಪಿಸುವಂತೆ ಸಕರ್ಾರವನ್ನು ಆಗ್ರಹಿಸಲು ಇದೇ ನ.25ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹಕ್ಕೋತ್ತಾಯ ಸಮಾವೇಶವನ್ನು ಆಯೋಜಿಸಿರುವುದಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜನಬಸವ ಮೃತ್ಯುಂಜಯ ಶ್ರೀಗಳು ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈಗಾಗಲೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅರಭಾವಿ,
ಗೋಕಾಕಗಳಲ್ಲಿ ಈ ಸಮಾವೇಶವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಖಾನಾಪುರ ತಾಲೂಕಿನ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇಡೀ ತಾಲೂಕಿನ ಜನಸಂಖ್ಯೆಯ ಶೇ.40ರಷ್ಟು ಲಿಂಗಾಯತ
ಪಂಚಮಸಾಲಿ ಮತ್ತು ಇತರೆ ಉಪ ಪಂಗಡಗಳ ಜನರು ವಾಸಿಸುತ್ತಿದ್ದಾರೆ. ಇವರೆಲ್ಲರಿಗೂ ರಾಜ್ಯ ಸರ್ಕಾರದಿಂದ 2 ಅ ಮೀಸಲಾತಿ ಕಲ್ಪಿಸುವ ಮತ್ತು ಕೇಂದ್ರ ಸಕರ್ಾರದಿಂದ ಒಬಿಸಿ
ಪಟ್ಟಿಯಲ್ಲಿ ಸೇರಿಸುವ ಸಲುವಾಗಿ ನಡೆಯುತ್ತಿರುವ ಕಳೆದ 2 ವರ್ಷಗಳಿಂದ ಹೋರಾಟದ ಭಾಗವಾಗಿ ಈ ಸಮಾವೇಶ ನಡೆಯಲಿದೆ ಎಂದು ವಿವರಿಸಿದರು.
ಅಖಿಲ ಭಾರತ ಲಿಂಗಾಯತ ಮಹಾಸಭಾದ ಜಿಲ್ಲಾ ಮುಖಂಡ ಅಡಿವೇಶ ಇಟಗಿ ಮಾತನಾಡಿ, ಕೂಡಲಸಂಗಮ ಶ್ರೀಗಳು ನ.25ರವರೆಗೆ ತಾಲೂಕಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸಮಾವೇಶದ
ಪೂರ್ವಭಾವಿಯಾಗಿ ಪ್ರತಿನಿತ್ಯ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಗುರುವಾರ ಹಿರೇಹಟ್ಟಿಹೊಳಿ ಮತ್ತು ದೇವಲತ್ತಿಗಳಿಗೆ ಭೇಟಿ ನೀಡಿ ಸಮಾವೇಶದ ಬಗ್ಗೆ ಅಲ್ಲಿಯ ಜನರಿಗೆ ಮಾಹಿತಿ ಒದಗಿಸಲಾಯಿತು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಂಗಮೇಶ ವಾಲಿ, ತೋಪಿನಕಟ್ಟಿ ಶ್ರೀ ಮಹಾಲಕ್ಷ್ಮೀ ಗ್ರುಪ್ ಸಂಸ್ಥಾಪಕ ವಿಠ್ಠಲ ಹಲಗೇಕರ, ಮುಖಂಡರಾದ ಅಶೋಕ ಯಮಕನಮರಡಿ,
ಸಂತೋಷ ಹಂಜಿ, ಪಂಡಿತ ಓಗಲೆ, ಸಂಜಯ ಕುಬಲ, ರುದ್ರಪ್ಪ ಕುಂಕೂರ, ಸುನೀಲ ಮಡ್ಡಿಮನಿ, ಶ್ರೀಕಾಂತ ಇಟಗಿ, ಆರ್.ಕೆ ಪಾಟೀಲ, ನಿಂಗಪ್ಪ ಪಿರೋಜಿ, ಬಸವರಾಜ ಸಾಣಿಕೊಪ್ಪ
ಮತ್ತಿತರರು ಇದ್ದರು.
https://pragati.taskdun.com/winter-sessionsuvarna-vidhanasoudhacabinet-meetingshreegandha-neeti-2022/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ