ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ರೋಸ್ಟರ್ ಪದ್ಧತಿ ಪಾಲಿಸುವ ಷರತ್ತು ರದ್ಧುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಉಚ್ಚ ನ್ಯಾಯಾಲಯ ಈ ಕುರಿತು ಹೊರಡಿಸಿರುವ ಆದೇಶವನ್ನು ಉಲ್ಲೇಖಿಸಿ ಸರಕಾರ ಸುತ್ತೋಲೆ ಹೊರಡಿಸಿದೆ. ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಪ್ರಗತಿವಾಹಿನಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಳೆ10 ವರ್ಷದಿಂದ ಈ ವಿಷಯ ಬಗೆಹರಿದಿರಲಿಲ್ಲ. ಇದರಿಂದಾಗಿ ಭಾಷಾ ಅಲ್ಪಸಂಖ್ಯಾತ ಸಂಸ್ಥೆಗಳ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿತ್ತು. ಈಗ ಸಮಸ್ಯೆ ಬಗೆಹರಿದಿದೆ-ಅರುಣ ಶಹಾಪುರ
ಪ್ರಕರಣದ ವಿವರ –
ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಮೀಸಲಾತಿ ಪಾಲಿಸುವ ಬಗ್ಗೆ ಫ್ರೆಂಡ್ಸ್ ಕಲ್ಟರಲ್ ಎಜುಕೇಷನ್ ಟ್ರಸ್ಟ್, ಬೆಂಗಳೂರು ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ ಮತ್ತಿತರರು ಸರ್ಕಾರದ ಅಧಿಸೂಚನೆ ಸಂಖ್ಯೆ, ಇಡಿ 61 ಎಸ್‌ಎಂಸಿ 2009, ದಿನಾಂಕ: 03-09-2010ನ್ನು ರದ್ದುಪಡಿಸುವಂತೆ ಕೋರಿ ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ದಾಖಲಿಸಿರುವ ರಿಟ್ ಅರ್ಜಿಸಂಖ್ಯೆ: 9744/2012 ದಿನಾಂಕ:25-10-2013ರ ಆದೇಶದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನನ್ವಯ ಭಾಷಾ ಅಲ್ಪಸಂಖ್ಯಾತ ಶಾಲೆಗಳಲ್ಲಿ ಮೀಸಲಾತಿ ಪಾಲಿಸಬೇಕೆಂಬ ಸರ್ಕಾರದ ನಿರ್ದೇಶವನ್ನು ರದ್ದುಪಡಿಸಿ ಆದೇಶಿಸಲಾಗಿರುತ್ತದೆ. ಸದರಿ ತೀರ್ಪಿನ ಉದ್ಘತ ಭಾಗವು ಈ ಕೆಳಕಂಡಂತಿದೆ.
“Therefore the directions issued by the State Government as per Annexure- G is not tenable and is accordingly quashed. It is open for the petitioner to make appointment to the vacancy that is created on its own, provided the criteria and eligibility conditions,
which are otherwise prescribed for teachers recommended by the State Government, are complied with the direction issued by the State Government to the effect that all linguistic minority institutions shall comply with the roaster policy shall not apply to the petitioner in view of the above decision of the Supreme Court, Consequently, that portion of Annexure-J which is to the contrary, stands quashed.”
ಈ ಹಿನ್ನೆಲೆಯಲ್ಲಿ ಫ್ರೆಂಡ್ಸ್ ಕಲ್ಟರಲ್ ಎಜುಕೇಷನಲ್ ಟ್ರಸ್ಟ್, ಬೆಂಗಳೂರು ಇವರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ: 9744/2012ರ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ: 25-10-2013ರಂದು ನೀಡಿರುವ ತೀರ್ಪಿನಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 61 ಎಸ್‌ಎಂಸಿ 2009 ದಿನಾಂಕ: 03/09/2010ರಲ್ಲಿ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೆಂದು ಘೋಷಿಸುವ ಸಂದರ್ಭದಲ್ಲಿ ರೋಸ್ಟರ್ ಪದ್ಧತಿ ಪಾಲಿಸುವ ಷರತ್ತು ವಿಧಿಸಿರುವುದನ್ನು ರದ್ದುಗೊಳಿಸಿರುವುದರಿಂದ ಸದರಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಲು ಕೂಡಲೇ ಕ್ರಮವಹಿಸುವಂತೆ ಈ ಮೂಲಕ ತಿಳಿಸಲು ನಾನು ನಿರ್ದೇಶಿತನಾಗಿದ್ದೇನೆ.
-ಧನಂಜಯ ಎಂ, ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ