ಪ್ರಗತಿವಾಹಿನಿ ಸುದ್ದಿ; ಮಂಗಳೂರು: ವಿದ್ಯಾರ್ಥಿಗಳಿಂದ ಲಿಪ್ ಲಾಕ್ ಚಾಲೇಂಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 8 ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಲಿಪ್ ಲಾಕ್ ಚಾಲೇಂಜ್ ಮಾಡಿ ಸ್ನೇಹಿತರ ಎದುರಲ್ಲಿ ಶಾಲಾ ಬಾಲಕಿಗೆ ವಿದಾರ್ಥಿಯೊಬ್ಬ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿದ್ಯಾರ್ಥಿಗಳ ಇಂತಹ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದಕ್ಷಿಣ ಕನ್ನಡ ಪೊಲೀಸರು ಇದೀಗ 8 ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರಿನ ಖಾಸಗಿ ಫ್ಲಾಟ್ ನಲ್ಲಿ 6 ತಿಂಗಳ ಹಿಂದೆ ಈ ಘಟನೆ ನಡೆದಿತ್ತು. ಕಾಲೇಜು ವಿದ್ಯಾರ್ಥಿಗಳು ಎರಡು ತಿಂಗಳ ಕಾಲ ಫ್ಲಾಟ್ ಬಾಡಿಗೆ ಪಡೆದು, ತಮ್ಮ ಗರ್ಲ್ ಫ್ರೆಂಡ್ಸ್ ಕರೆದುಕೊಂಡು ಬಂದು ಟ್ರೂಥ್ ಆರ್ ಡೇರ್ ಆಟವನ್ನು ಆಡಿದ್ದರು. ಈ ವೇಳೆ ಲಿಪ್ ಲಾಕ್ ಸ್ಪರ್ಧೆ ಆಯೋಜಿಸಿದ್ದರು.
ಸ್ನೇಹಿತರು ಹಾಗೂ ಜನರ ಎದುರು ಹುಡುಗನೊಬ್ಬ ಹುಡುಗಿಯೊಬ್ಬಳ ತುಟಿಗೆ ಮುತ್ತಿಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಲಿಪ್ ಲಾಕ್ ಚಾಲೇಂಜ್ ದೃಶ್ಯವನ್ನು ಇನ್ನೋರ್ವ ವಿದ್ಯಾರ್ಥಿ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಬಳಿಕ ವಾಟ್ಸಪ್ ನಲ್ಲಿ ಶೇರ್ ಮಾಡಿದ್ದ. ಈ ವಿಡಿಯೋ ಕಾಲೇಜು ಆಡಳಿತ ಮಂಡಳಿ ಗಮನಕ್ಕೂ ಬಂದಿತ್ತು. ಕಾಲೇಜಿನಿಂದ ಕೆಲ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ 8 ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಓರ್ವ ವಿದ್ಯಾರ್ಥಿ ವಿದೇಶಕ್ಕೆ ತೆರಳಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸಲಾಗಿದೆ.
PSI ಹುದ್ದೆ ನೇಮಕಾತಿ ಅಕ್ರಮ ಕೇಸ್; ಐವರು ಆರೋಪಿಗಳ ಜಾಮೀನು ಅರ್ಜಿ ವಜಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ