Kannada NewsKarnataka News

ಯರಗಟ್ಟಿ ಬಳಿ ಮದ್ಯ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾರಿನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಉಪ ಅಧೀಕ್ಷಕರು ರಾಮದುರ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸವದತ್ತಿ ತಾಲೂಕಿನ ಯರಗಟ್ಟಿ-ಗೋಕಾಕ ರಾಜ್ಯ ಹೆದ್ದಾರಿ 45 ರಸ್ತೆಯಲ್ಲಿ ರಸ್ತೆಗಾವಲು ನಡೆಸುತ್ತಿರುವಾಗ 4 ಚಕ್ರದ ಮಾರುತಿ ಆಲ್ಟೊ ವಾಹನವನ್ನು ಶೋಧನೆ ಮಾಡಿದಾಗ 25 ಬಾಕ್ಸಗಳಲ್ಲಿ 90 ಎಮ್.ಎಲ್ ನ ಓರಿಜಿನಲ್ ಚಾಯ್ಸ್ ವಿಸ್ಕಿಯ 2400 ಟೆಟ್ರಾ ಪ್ಯಾಕೇಟಗಳು ( 216 ಲೀ) ಕಂಡು ಬಂದಿದೆ.

ಅಂದಾಜು 300000/- ರೂ ಮೌಲ್ಯದ ವಾಹನ ಹಾಗೂ 84,312/- ರೂ  ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ನಿರೀಕ್ಷಕರು ರಾಮದುರ್ಗ ಉಪ ವಿಭಾಗ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಆರೋಪಿಯನ್ನು ಬಂಧಿಸಲಾಗಿದೆ.

https://pragati.taskdun.com/4-5-lakh-cash-seized-in-arabavi-constituency/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button