ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶನಿವಾರ ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಸರಕಾರದ ನೂತನ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಬ್ಬರು ಮಾತ್ರ ಉಪಮುಖ್ಯಮಂತ್ರಿ ಇರಲಿದ್ದಾರೆ ಎಂದು ಈಗಾಗಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ತಿಳಿಸಿದ್ದಾರೆ. ಜೊತೆಗೆ ಹಲವು ಮಂತ್ರಿಗಳು ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದೂ ತಿಳಿಸಿದ್ದಾರೆ. ಎಷ್ಟು ಜನ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ನವದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ ಮಂತ್ರಿಗಳ ಪಟ್ಟಿ ಅಂತಿಮಗೊಳಿಸುತ್ತಿದ್ದಾರೆ. ಫೈನಲ್ ಲಿಸ್ಟ್ ಜೊತೆಗೆ ಅವರು ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪಟ್ಟಿ ಅಂತಿಮವಾದ ತಕ್ಷಣ ಅದನ್ನು ಬಹಿರಂಗಗೊಳಿಸಲಾಗುತ್ತದೆಯೋ ಅಥವಾ ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆಯೇ ಬಹಿರಂಗವಾಗಲಿದೆಯೇ ಎನ್ನುವುದನ್ನು ಕೋದು ನೋಡಬೇಕಿದೆ.
ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ:
ಡಾ.ಜಿ.ಪರಮೇಶ್ವರ
ಎಂ.ಬಿ.ಪಾಟೀಲ
ಶಾಮನೂರು ಶಿವಶಂಕರಪ್ಪ
ಯು.ಟಿ.ಖಾದರ್
ಟಿ.ಬಿ.ಜಯಚಂದ್ರ
ಆರ್.ವಿ.ದೇಶಪಾಂಡೆ
ಎಚ್.ಕೆ.ಪಾಟೀಲ
ರಾಮಲಿಂಗಾ ರಡ್ಡಿ
ಸತೀಶ್ ಜಾರಕಿಹೊಳಿ
ಈಶ್ವರ ಖಂಡ್ರೆ
ಲಕ್ಷ್ಮೀ ಹೆಬ್ಬಾಳಕರ್
ಲಕ್ಷ್ಮಣ ಸವದಿ
ಬೇಳೂರು ಗೋಪಾಲಕೃಷ್ಣ
ಎಚ್.ಸಿ.ಮಹಾದೇವಪ್ಪ
ಬಿ.ಕೆ.ಹರಿಪ್ರಸಾದ
ದಿನೇಶ ಗುಂಡೂರಾವ್,
ಕೃಷ್ಣ ಭೈರೇಗೌಡ
ಕೆ.ಜೆ.ಜಾರ್ಜ್
ಪ್ರಿಯಾಂಕ ಖರ್ಗೆ
ಭೈರತಿ ಸುರೇಶ
ಶಿವಲಿಂಗೇ ಗೌಡ
ಆರ್.ಬಿ.ತಿಮ್ಮಾಪುರ
ಜಮೀರ್ ಅಹ್ಮದ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ