ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಿ.5ರಂದು ನಡೆಯಲಿರುವ ಅಥಣಿ ಹಾಗೂ ಗೋಕಾಕ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದೆ.
ಅಥಣಿಯಲ್ಲಿ 16 ಹಾಗೂ ಗೋಕಾಕದಲ್ಲಿ 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದು, ಸ್ವೀಕರಿಸಲಾಗಿದೆ.
ಅಥಣಿಯಲ್ಲಿ ಕಾಂಗ್ರೆಸ್ ನ ಗಜಾನನ ಮಂಗಸೂಳಿ, ಜೆಡಿಎಸ್ ನ ಗುರಪ್ಪ ದುಶ್ಯಾಳ, ಬಿಜೆಪಿಯ ಮಹೇಶ ಕುಮಟಳ್ಳಿ, ರಾಷ್ಟ್ರೀಯ ಮಹಿಳಾ ಪಕ್ಷದಿಂದ ದಾವುಲ್ ಸಾಬ್ ನದಾಫ್, ಉತ್ತಮ ಪ್ರಜಾಕೀಯ ಪಕ್ಷದಿಂದ ನಾಗನಾಥ, ಕರ್ನಾಟಕ ಜನತಾ ಪಾರ್ಟಿಯಿಂದ ವಿನಾಯಕ ಮಠಪತಿ, ಪಕ್ಷೇತರರಾದ ಅಜ್ಜಪ್ಪ ಬಾಹುಬಲಿ, ಇಮ್ರಾನ್ ಪಟೇಲ, ಗುರುಪುತ್ರ ಕುಳ್ಳೂರ್, ರವಿ ಪಡಸಲಗಿ, ರಸೂಲ್ ಸಾಬ್ ನದಾಫ್, ರಾಜು ಡವರಿ, ಶಹಜಹಾನ್ ಡೊಂಗರಗಾಂವ್, ಶಿದ್ರಾಮ ಗೌಡ ಪಾಟೀಲ, ಶ್ರೀಶೈಲ ಹಳ್ಳದಮಳ್ಳ, ಸದಾಶಿವ ಬೂಟಾಳೆ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.
ಗೋಕಾದಲ್ಲಿ ಜೆಡಿಎಸ್ ನ ಅಶೋಕ ಪೂಜಾರಿ, ಬಿಜೆಪಿಯ ರಮೇಶ ಜಾರಕಿಹೊಳಿ, ಕಾಂಗ್ರೆಸ್ ನ ಲಖನ್ ಜಾರಕಿಹೊಳಿ, ಹಿಂದುಸ್ತಾನ್ ಜನತಾಪಾರ್ಟಿಯ ದೀಪಕ್ ಉರ್ಫ ಶ್ರೀವೆಂಕಟೇಶ್ವರ ಮಹಾಸ್ವಾಮೀಜಿ, ಉತ್ತಮ ಪ್ರಜಾಕೀಯ ಪಾರ್ಟಿಯ ಸಂತೋಶ ನಂದೂರ್, ಪಕ್ಷೇತರರಾದ ಅಶೋಕ ಹಂಜಿ, ಗುರುಪುತ್ರಪ್ಪ ಕುಳ್ಳೂರ್, ಪ್ರಕಾಶ ಬಾಗೋಜಿ, ರಾಮಪ್ಪ ಕುರಬೆಟ್, ಸತೀಶ್ ಅಶೋಕ ಪೂಜಾರಿ, ಸಂಜಯ ಕುರಬೆಟ್ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ