Latest

ಸುಕೋ ಬ್ಯಾಂಕಿನಿಂದ ಸಾಲ ಉತ್ಸವ, ಒಂದೇ ದಿನದಲ್ಲಿ ಸಾಲ ಮಂಜೂರು -ಮೋಹಿತ ಮಸ್ಕಿ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ –  ರಾಜ್ಯದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ಫೆಬ್ರವರಿ ೭ರ ಸೋಮವಾರದ ರಥ ಸಪ್ತಮಿ ದಿನದಿಂದ ಶೇ. ೯% ರಿಂದ ಶೇ. ೧೦%ರ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತಿದೆ. ಈ ರಥ ಸಪ್ತಮಿ ಸಾಲಮೇಳ ಫೆಬ್ರವರಿ ೨೮ ರವರೆಗೆ ಜಾರಿಯಲ್ಲಿರುತ್ತದೆ.

ಕೋವಿಡ್ ಕಾರಣದಿಂದ ವ್ಯಾಪಾರ ವಹಿವಾಟುಗಳಿಗೆ ಹಿನ್ನಡೆಯಾಗಿದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದುಕೊಳ್ಳುತ್ತಿರುವಾಗಲೇ ಜನೆವರಿ ತಿಂಗಳ ಜಿಎಸ್‌ಟಿ ೧.೪ ಕೋಟಿ ರೂಪಾಯಿಯಷ್ಟು ಸಂಗ್ರಹವಾಗಿದೆ. ಈ ಮೊತ್ತವು ಇದುವರೆಗಿನ ದೇಶದ ಜಿಎಸ್‌ಟಿ ಸಂಗ್ರಹದ ಅತಿ
ದೊಡ್ಡ ಸಂಗ್ರಹವಾಗಿದೆ. ಇದೇ ಸಮಯದಲ್ಲಿ ಕರೋನಾ ೩ ನೇ ಅಲೆ ಬಹಳ ಬೇಗನೇ, ಯಾವುದೇ ಹೆಚ್ಚಿನ ಪರಿಣಾಮ ಬೀರದೆ ಕಡಿಮೆಯಾಗಿದೆ.

Home add -Advt

ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕ್ ಆಗಿರುವ ಸುಕೋ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಮತ್ತು ಉದ್ದಿಮೆದಾರರಲ್ಲಿ ವ್ಯಾಪಾರ ವಹಿವಾಟು ಹೆಚ್ಚಿಸುವ ವಿಶ್ವಾಸ ತುಂಬಲು ಈ ರಥ ಸಪ್ತಮಿಯಿಂದ ಸಾಲ ಉತ್ಸವ ಆಚರಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಮೋಹಿತ ಮಸ್ಕಿ ಅವರು ತಿಳಿಸಿದ್ದಾರೆ.

ಅತಿ ಕನಿಷ್ಟ ಶೇ. ೯%ರ ಬಡ್ಡಿದರ
ಈ ಸಾಲ ಮೇಳದ ಸಮಯದಲ್ಲಿ ಸಾಲ ಪಡೆಯುವವರಿಗೆ ಅತಿ ಕನಿಷ್ಟ ಶೇ. ೯% ರ ಬಡ್ಡಿ ದರದಿಂದ ಸಾಲ ಮಂಜೂರಾತಿ ಮಾಡಲಾಗುತ್ತದೆ. ಮತ್ತು ಸಾಲಗಳನ್ನು ಅದೇ ದಿನ ಮಂಜೂರಾತಿ ಮಾಡಲಾಗುತ್ತದೆ.

ಸಣ್ಣ ವ್ಯಾಪಾರಿಗಳಿಗಾಗಿ ಸಾಲ, ಜಿಎಸ್‌ಟಿ ಸಾಲ, ಯಂತ್ರೋಪಕರಣಗಳ ಖರೀದಿಗಾಗಿ ಸಾಲ, ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣ ಸಾಲ, ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ಮೇಲಿನ ಸಾಲಗಳು ಸೇರಿದಂತೆ ಇನ್ನೂ ಹಲವು ಸಾಲ ಸೌಲಭ್ಯಗಳು ಈ ಸಾಲ ಮೇಳ ಸಮಯದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಲಭ್ಯ ಇವೆ .

ಈ ಎಲ್ಲಾ ಸಾಲ ಸೌಲಭ್ಯಗಳ ಮಂಜೂರಾತಿ ಒಂದೇ ದಿನದಲ್ಲಿ ಮಾಡಲಾಗುತ್ತದೆ ಎಂದು ಸುಕೋ ಬ್ಯಾಂಕಿನ ಅಧ್ಯಕ್ಷ ಮೋಹಿತ ಮಸ್ಕಿ ಅವರು ತಿಳಿಸಿದ್ದಾರೆ.

ಆಸಕ್ತರು ಸುಕೋ ಬ್ಯಾಂಕಿನ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ೧೮೦೦ ೧೨೧ ೫೫೬೦ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ತಿತಿತಿ.suಛಿobಚಿಟಿಞ.iಟಿ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವ ಮೂಲಕ ಅಥವಾ ಸುಕೋ ಬ್ಯಾಂಕಿನ ಫೇಸ್ ಬುಕ್ ಖಾತೆಗೆ ಭೇಟಿ ನೀಡುವ ಮೂಲಕ ಹಚ್ಚಿನ ಮಾಹಿತಿ ಪಡೆಯಬಹುದು ಮತ್ತು ಅಲ್ಲಿಯೇ ಆನ್ ಲೈನ್ ಅರ್ಜಿಯನ್ನು ಭರ್ತಿ ಮಾಡಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಹೇಳಲಾಗದಷ್ಟು ದು:ಖಿತನಾಗಿದ್ದೇನೆ; ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ಸಂತಾಪ

Related Articles

Back to top button