Latest

ತಾಯಿಯ ಗೆಳತಿಯೊಂದಿಗೇ ಸಂಪರ್ಕದಲ್ಲಿದ್ದೆ: ಸತ್ಯ ಬಿಚ್ಚಿಟ್ಟ ರಿಯಾಲಿಟಿ ಶೋ ಸ್ಪರ್ಧಿ !

 ಪ್ರಗತಿ ವಾಹಿನಿ ಸುದ್ದಿ ಮುಂಬೈ – 

ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಲಾಕ್ ಅಪ್ ಅನೇಕ ಸೆಲೆಬ್ರಿಟಿಗಳ ವಯಕ್ತಿಕ ಜೀವನದ ರಹಸ್ಯಗಳನ್ನು ಕಿರುತೆರೆಯಲ್ಲಿ ತೆರದಿಡುತ್ತಿದೆ. ಭಾನುವಾರ ಈ ಶೋನ ಸ್ಪರ್ಧಿ ಶಿವಂ ಶರ್ಮಾ ತನ್ನ ಜೀವನದ ಆಘಾತಕಾರಿ ಸಂಗತಿಯೊಂದನ್ನು ಬಾಯ್ಬಿಟ್ಟಿದ್ದಾನೆ.

Home add -Advt

ಭಾನುವಾರದ ಶೋ ನಲ್ಲಿ ಶೋ ಹೋಸ್ಟ್ ಕಂಗನಾ, ಶಿವಂಗೆ ಸ್ಪರ್ಧೆಯಿಂದ ಹೊರ ಹೋಗದೆ ಉಳಿಯಬೇಕೆಂದರೆ ನಿನ್ನ ಬದುಕಿನಲ್ಲಿ ನಡೆದ ರಹಸ್ಯ ಘಟನೆಯನ್ನು ಹೇಳು ಎಂದಿದ್ದಾರೆ. ಈ ವೇಳೆ ತನ್ನ ಕಾಲೇಜು ದಿನದಲ್ಲಿ ನಡೆದ ಘಟನೆಯೊಂದನ್ನು ಶಿವಂ ಬಾಯಿಬಿಟ್ಟಿದ್ದಾನೆ.

ಕಾಲೇಜು ದಿನಗಳ ಅವಧಿಯಲ್ಲಿ ನಮ್ಮ ಮನೆಯ ಸಮೀಪ ಮಹಿಳೆಯೊಬ್ಬರು ವಾಸ ಮಾಡುತ್ತಿದ್ದರು. ಅವರು ವಿವಾಹ ವಿಚ್ಛೇದನ ಪಡೆದಿದ್ದರು. ನಾನು ಅವರೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದೆ. ಆದರೆ ಇದರಲ್ಲಿ ನನಗೆ ಯಾವುದೇ ತಪ್ಪು ಕಾಣುತ್ತಿಲ್ಲ. ಯಾಕೆಂದರೆ ಅದಾಗಲೇ ಆ ಮಹಿಳೆ ವಿವಾಹ ವಿಚ್ಛೇದನ ಪಡೆದಿದ್ದರು ಎಂದು ಶಿವಂ ಹೇಳಿದ್ದಾರೆ.

ಲಾಕಪ್ ರಿಯಾಲಿಟಿ ಶೋ, ದಿನದಿಂದ ದಿನಕ್ಕೆ ಜನರ ಅಂತರಾಳದ ಸತ್ಯವನ್ನು ಬಿಚ್ಚುಡುತ್ತಿದ್ದು, ಈ ರೀತಿ ಬಹಿರಂಗವಾಗಿ ತಮ್ಮ ಪ್ರಮಾದಗಳನ್ನು ಹೇಳಿಕೊಳ್ಳುವುದು ಸರಿಯೇ ತಪ್ಪೇ ಎಂಬ ವಿವಾಧ ಹುಟ್ಟುಹಾಕುತ್ತಿದೆ. ಈ ಮೊದಲು ಶೋ ನ ಸ್ಪರ್ಧಿಯೊಬ್ಬರು, ವಾಣಿಜ್ಯೋದ್ಯಮಿಯೊಬ್ಬ ತನ್ನ ಪತ್ನಿಯೊಂದಿಗೆ ರಾತ್ರಿ ಕಳೆಯುವಂತೆ ಆಹ್ವಾನಿಸಿದ್ದಾಗಿ ಸ್ಪರ್ಧಿಯೊಬ್ಬ ಹೇಳಿಕೊಂಡಿದ್ದ. ಈ ರೀತಿಯ ವಿಷಯಗಳು ಜನರ ಮನಸ್ಸಿನ ಭಾವನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ ಎಂಬ ಆರೋಪವೂ ದಟ್ಟವಾಗಿ ಕೇಳಿ ಬರುತ್ತಿದೆ.

ನೀತಿ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಟ

Related Articles

Back to top button