ಖಾಸಗಿ ವಾಹನಗಳಲ್ಲಿ ಊರಿಗೆ ತೆರಳಲು ನೀಡಿದ್ದ ಅವಕಾಶ ರದ್ದು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ನಿಂದಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಹಲವರು ಊರುಗಳಿಗೆ ಹೋಗಲಾಗದೇ ಪರಿತಪಿಸುವಂತಾಗಿದೆ. ನಿನ್ನೆ ಖಾಸಗಿ ವಾಹನಗಳಲ್ಲಿ ಊರಿಗೆ ತೆರಳಲು ಅವಕಾಶ ನೀಡಿದ್ದ ಸಾರ್ಕಾರ ಇಂದು ಆದೇಶವನ್ನೇ ಹಿಂಪಡೆದಿದೆ.

ಲಾಕ್ ಡೌನ್ ಘೋಷಿಸಿದಾಗಿನಿಂದ ನಗರ ಹಾಗೂ ಇತರ ಭಾಗಗಳಲ್ಲಿ ಸಿಲುಕಿರುವ ಜನರು ತಮ್ಮ ತಮ್ಮ ಊರುಗಳಿಗೆ ವಾಪಸ್ ಹೋಗಲು ಕಾಯುತ್ತಿದ್ದು, ಮೂರನೇ ಹಂತದ ಲಾಕ್ ಡೌನ್ ನಾಳೆಯಿಂದ ಮೇ 17ರವರೆಗೆ ಮುಂದುವರೆಯಲಿದ್ದು, ಈ ನಡುವೆ ಖಾಸಗಿ ವಾಹನಗಳಲ್ಲಿ ಚಾಲಕ ಸಮೇತ ಮೂವರು ಊರಿಗೆ ತೆರಳಲು ಸರ್ಕಾರ ಆದೇಶ ನೀಡಿತ್ತು.

ಆದರೆ, ಈಗ ಸರ್ಕಾರ ಆದೇಶವನ್ನು ಹಿಂಪಡೆದಿದೆ. ಉಚಿತ ಬಸ್ ವ್ಯವಸ್ಥೆ ಮಾಡಿರುವುದರಿಂದ ಖಾಸಗಿ ವಾಹನಗಳಿಗೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ, ಯಾವುದೇ ರೀತಿಯ ಪಾಸ್ ನೀಡದಂತೆ ಪೊಲೀಸರಿಗೆ ಸರ್ಕಾರದಿಂದ ಮೌಖಿಕ ಆದೇಶ ನೀಡಲಾಗಿದೆ ಎಂದು ತಿಳಿದುಬಂದಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button