*ರಾಷ್ಟ್ರೀಯ ಲೋಕ ಅದಾಲತ ಪೂರ್ವಭಾವಿ ಸಭೆ; ರಾಜಿ ಸಂಧಾನ ಮಾಡುವಂತೆ ನ್ಯಾಯಾಧೀಶರ ಕರೆ*

ಪ್ರಗತಿವಾಹಿನಿ ಸುದ್ದಿ; ರಾಯಭಾಗ: ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿಯಾಗುವಂತಹ ಪ್ರಕರಣಗಳನ್ನು ರಾಜಿ ಸಂದಾನ ಮಾಡಿಸುವಂತೆ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜಪ್ಪ ಕೆ ಎಮ್ ಕರೆ ನೀಡಿದರು.
ರಾಷ್ಟ್ರೀಯ ಲೋಕ ಅದಾಲತ ಬರುವ ಜುಲೈ 8 ರಂದು ನಿಗದಿಯಾದ ಹಿನ್ನೆಲೆಯಲ್ಲಿ ವಕೀಲರ ಸಂಘದಲ್ಲಿ ಪೂರ್ವಭಾವಿ ಸಭೆ ಕರೆದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಲೋಕ ಅದಾಲತ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಶ್ರಮಪಡುವಂತೆ ವಕೀಲರಿಗೆ ಸಲಹೆ ನೀಡಿದರು.
ಲೋಕ ಅದಾಲತ್ ನಲ್ಲಿ ಚೆಕ್ ಬೌನ್ಸ್ ಪ್ರಕರಣಗಳು, ಬ್ಯಾಂಕಿಗೆ ಸಂಬಂಧಿಸಿದ ಹಣಕಾಸಿನ ಪ್ರಕರಣಗಳು, ರಾಜಿ ಹೊಂದಾಣಿಕೆಯಿಂದ ಮುಗಿಯುವಂತಹ ಪಾಲು ವಿಭಾಗ ಪ್ರಕರಣಗಳು, ಮೋಟಾರ್ ವಾಹನ ಸಂಬಂಧಿತ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿದಂತೆ ರಾಜಿ ಸಂಧಾನ ಮಾಡಬಹುದಾಗಿದೆ ಎಂದು ಹೇಳಿದರು ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸಹಕರಿಸಬೇಕು ರಾಜಿ ಆಗುವಂತಹ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳಿಗೆ ತಿಳಿಹೇಳಿ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಮುಂದಾಗಬೇಕೆಂದು ಹೇಳಿದರು ವಕೀಲರು ತಮ್ಮ ಪಕ್ಷಗಾರರಿಗೆ ರಾಷ್ಟ್ರೀಯ ಲೋಕ ಅದಾಲತ ಬಗ್ಗೆ ತಿಳುವಳಿಕೆ ನೀಡಬೇಕೆಂದು ಹೇಳಿದರು ರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ವಕೀಲರು ತಪ್ಪದೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಆರ್‌ಎಚ್ ಗೊಂಡೆ ಮಾತನಾಡಿ, ಹಿರಿಯ ಕಿರಿಯ ವಕೀಲರು ತಮ್ಮ ಪಕ್ಷಗಾರರಿಗೆ ರಾಷ್ಟ್ರೀಯ ಲೋಕ ಅದಾಲತ ಕುರಿತು ಮಾಹಿತಿ ನೀಡಬೇಕೆಂದು ಕೋರಿದರು ಮತ್ತು ಲೋಕ ಅದಾಲತ್ ಯಶಸ್ವಿಯಾಗಲು ಸಹಕರಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ದಿವಾನಿ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜಪ್ಪ ಕೆಎಂ, ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರಾದ ಅಲೋಕ ಎಎನ್, ಹೆಚ್ಚುವರಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ ಪಾಣಗಂಟಿ, ಸಂಘದ ಅಧ್ಯಕ್ಷರಾದ ಆರ್ ಎಚ್ ಗೊಂಡೆ, ಕಾರ್ಯದರ್ಶಿ ಆರ್ ಎಸ್ ಹೊಳೆಪ್ಪಗೋಳ, ಹಿರಿಯ ನ್ಯಾಯವಾದಿಗಳಾದ ಎಲ್ ಬಿ ಚೌಗಲಾ, ವಿಲಾಸ ಮೋರೆ, ಎಬಿ ಮಂಗಸೂಳೆ, ವಿಜಿ ಕವಟಗೊಪ್ಪ, ಎಂ ಕೆ ಕೊಂಬಾರೆ, ಎನ್ ಎಂ ಎಡವನ್ನವರ್, ಎಸ್ ಬಿ ಪಾಟೀಲ್, ಎ ಎಮ್ ಗೆಜ್ಜೆ, ಆರ್ ಎಲ್ ಅಶೋದೆ, ಪಿ ಆರ್ ಗುಡೋಡಗಿ, ಡಿ ಎಂ ನಾಯಕ್, ಸೇರಿದಂತೆ ಹಿರಿಯ ಕಿರಿಯ ನ್ಯಾಯವಾದಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ