Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಚೆಕ್ ಪೋಸ್ಟ್‌ ನಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಸೀಜ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಅಳವಡಿಸಿರುವ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಹಣ ಸೀಜ್ ಮಾಡಿಕೊಂಡು, ಚುನಾವಣೆ ಸಂಧರ್ಭದಲ್ಲಿ ಅಕ್ರಮ ಮಾಡುವವರಿಗೆ ಶಾಕ್ ನೀಡಿದೆ.

Home add -Advt

ನಿನ್ನೆ ಸಾಯಂಕಾಲ ಗೋಕಾಕ್ ನ ಘಟಪ್ರಭಾ ಚೆಕ್ ಪೋಸ್ಟ್ ನಲ್ಲಿ ಚುನಾವಾಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.70 ಲಕ್ಷ ಹಣ ಸೀಜ್ ಮಾಡಿಕೊಂಡಿದ್ದಾರೆ. ಕುಡಚಿ ಚೆಕ್ ಪೋಸ್ಟ್ ನಲ್ಲಿ ನಿನ್ನೆ ಸಾಯಂಕಾಲ 4 ಗಂಟೆ ಸುಮಾರಿಗೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9,86,480 ರೂಪಾಯಿ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಜೊತೆಗೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡು ಇರುವ ನಿಪ್ಪಾಣಿ ತಾಲೂಕಿನ ಕುಣಗೊಳಿ ಚೆಕ್ ಪೋಸ್ಟ್ ನಲ್ಲಿ 3 ಲಕ್ಷ ಹಣ ಸೀಜ್ ಮಾಡಲಾಗಿದೆ.

ಚುನಾವಣೆ ಹೊತ್ತಲ್ಲಿ ಸೂಕ್ತ ಭದ್ರತೆ ಜೊತೆಗೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಅಕ್ರಮ ತಡೆಯಲು ಪ್ರಯತ್ನಿಸುತ್ತಿರುವ ಜಿಲ್ಲಾ ಚುನಾವಣಾಧಿಕಾರಿಗಳು ನಿನ್ನೆ ಒಂದೆ ದಿನ 14,56,480 ರೂಪಾಯಿ ಜಪ್ತಿ ಮಾಡಿಕೊಂಡಿದ್ದು, ಅಕ್ರಮ ನಡೆಸಲು ಯತ್ನಿಸುತ್ತಿರುವರಿಗೆ ಬಿಸಿ ಮುಟ್ಟಿಸಿದೆ.

Related Articles

Back to top button