Kannada NewsKarnataka NewsLatestPolitics

*BREAKING NEWS: 28 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿಗಳು ಹಾಗೂ ಸಂಚಾಲಕರ ನೇಮಕ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕಗಳ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಿಸಿದ್ದು, ಪಟ್ಟಿ ಈ ಕೆಳಗಿನಂತಿದೆ.

ಕರ್ನಾಟಕ ರಾಜ್ಯ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ನೇಮಕಗೊಂಡಿದ್ದರೆ, ರಾಜ್ಯ ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ನೇಮಕಗೊಂಡಿದ್ದಾರೆ. ರಾಜ್ಯದ 28 ಕ್ಷೇತ್ರಗಳ ಉಸ್ತುವಾರಿ ಹಾಗೂ ಸಂಚಾಲಕರ ಪಟ್ಟಿ ಹೀಗಿದೆ.

ಉಸ್ತುವಾರಿಗಳ-ಸಂಚಾಲಕರ ಪಟ್ಟಿ:
1.ಮೈಸೂರು– ಡಾ.ಅಶ್ವತ್ಥ್ ನಾರಾಯಣ್-ಉಸ್ತುವಾರಿ, ರವಿಶಂಕರ್ ಹಾಗೂ ರಾಬಿನ್ ದೇವಯ್ಯ-ಸಂಚಾಲಕರು
2.ಚಾಮರಾಜನಗರ– ಎನ್‌.ವಿ.ಪನೀಶ್ -ಉಸ್ತುವಾರಿ, ಮಲ್ಲಿಕಾರ್ಜುನಪ್ಪ- ಸಂಚಾಲಕರು
3.ಮಂಡ್ಯ– ಸುನಿಲ್ ಸುಬ್ರಮಣಿ – ಉಸ್ತುವಾರಿ, ಸಿ.ಪಿ ಉಮೇಶ್ – ಸಂಚಾಲಕರು
4.ಹಾಸನ– ಎಂ.ಕೆ ಪ್ರಾಣೇಶ್ -ಉಸ್ತುವಾರಿ, ಪ್ರಸನ್ನ – ಸಂಚಾಲಕರು
5.ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ್ ಪೂಜಾರಿ- ಉಸ್ತುವಾರಿ, ನಿತಿನ್ ಕುಮಾರ್ -ಸಂಚಾಲಕರು
6.ಉಡುಪಿ-ಚಿಕ್ಕಮಗಳೂರು– ಆರಗ ಜ್ಞಾನೇಂದ್ರ – ಉಸ್ತುವಾರಿ, ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ- ಸಂಚಾಲಕರು
7.ಶಿವಮೊಗ್ಗ- ರಘುಪತಿ ಭಟ್- ಉಸ್ತುವಾರಿ, ಗಿರೀಶ್ ಪಟೇಲ್ ಸಂಚಾಲಕರು
8.ಉತ್ತರ ಕನ್ನಡ– ಹರತಾಳು ಹಾಲಪ್ಪ- ಉಸ್ತುವಾರಿ, ಗೋವಿಂದ ನಾಯಕ್ ಸಂಚಾಲಕರು
9.ಧಾರವಾಡ– ಈರಣ್ಣ ಕಡಾಡಿ ಉಸ್ತುವಾರಿ, ನಾಗರಾಜ್-ಸಂಚಾಲಕರು
10.ಹಾವೇರಿ– ಅರವಿಂದ್ ಬೆಲ್ಲದ್- ಉಸ್ತುವಾರಿ, ಕಳಕಪ್ಪ ಬಂಡಿ-ಸಂಚಾಲಕರು
11.ಬೆಳಗಾವಿ- ವೀರಣ್ಣ ಚರಂತಿಮಠ-ಉಸ್ತುವಾರಿ, ಸಂಜಯ್‌ ಪಾಟೀಲ್‌ -ಸಂಚಾಲಕರು
12.ಚಿಕ್ಕೋಡಿ- ಅಭಯ್ ಪಾಟೀಲ್-ಉಸ್ತುವಾರಿ, ರಾಜೇಶ್ ನೆರ್ಲಿ-ಸಂಚಾಲಕರು
13.ಬಾಗಲಕೋಟೆ– ಲಿಂಗಾರಾಜು ಪಾಟೀಲ್- ಉಸ್ತುವಾರಿ, ಸಿದ್ದು ಸವದಿ-ಸಂಚಾಲಕರು
14.ಬಿಜಾಪುರ– ರಾಜಶೇಖರ್ ಶೀಲವಂತ್-ಉಸ್ತುವಾರಿ, ಅರುಣ್ ಶಹಪುರ-ಸಂಚಾಲಕರು
15.ಬೀದರ್– ಅಮರನಾಥ್ ಪಾಟೀಲ್-ಉಸ್ತುವಾರಿ,ಅರಹಂತ ಸಾವ್ಲೆ-ಸಂಚಾಲಕರು
16.ಕಲಬುರಗಿ– ರಾಜುಗೌಡ-ಉಸ್ತುವಾರಿ, ಶೋಭಾ ಬನಿ ಸಂಚಾಲಕರು
17.ರಾಯಚೂರು– ದೊಡ್ಡನ ಗೌಡ ಪಾಟೀಲ್- ಉಸ್ತುವಾರಿ, ಗುರು ಕಾಮ-ಸಂಚಾಲಕರು
18.ಕೊಪ್ಪಳ– ರಘುನಾಥ್ ರಾವ್ ಮಲ್ಕಾಪುರೆ-ಉಸ್ತುವಾರಿ, ಗಿರಿಗೌಡ-ಸಂಚಾಲಕರು
19.ಬಳ್ಳಾರಿ– ಎನ್ ರವಿಕುಮಾರ್-ಉಸ್ತುವಾರಿ, ವೈ.ಎಂ ಸತೀಶ್- ಸಂಚಾಲಕರು
20.ದಾವಣಗೆರೆ– ಬೈರತಿ ಬಸವರಾಜ್-ಉಸ್ತುವಾರಿ, ವೀರೇಶ್ ಹಾನಗವಾಡಿ-ಸಂಚಾಲಕರು
21.ಚಿತ್ರದುರ್ಗ– ಚನ್ನಬಸಪ್ಪ- ಉಸ್ತುವಾರಿ, ಲಿಂಗಮಮೂರ್ತಿ-ಸಂಚಾಲಕರು
22.ತುಮಕೂರು – ಗೋಪಾಲಯ್ಯ-ಉಸ್ತುವಾರಿ, ಬೈರಣ್ಣ-ಸಂಚಾಲಕರು
23.ಚಿಕ್ಕಬಳ್ಳಾಪುರ – ಕಟ್ಟಾಸುಬ್ರಮಣ್ಯ ನಾಯ್ಡು-ಉಸ್ತುವಾರಿ, ಎ. ವಿ ನಾರಾಯಣ ಸ್ವಾಮಿ-ಸಂಚಾಲಕರು
24.ಕೋಲಾರ – ಬಿ. ಸುರೇಶ್ ಗೌಡ- ಉಸ್ತುವಾರಿ, ಮೈಗೇರಿ ನಾರಾಯಣ ಸ್ವಾಮಿ-ಸಂಚಾಲಕರು
25.ಬೆಂಗಳೂರು ಗ್ರಾಮಾಂತರ – ನಿರ್ಮಲ ಕುಮಾರ್ ಸುರಾನಾ-ಉಸ್ತುವಾರಿ, ಮುನಿರತ್ನ-ಸಂಚಾಲಕರು
26.ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ-ಉಸ್ತುವಾರಿ, ಉಮೇಶ್ ಶೆಟ್ಟಿ-ಸಂಚಾಲಕರು
27.ಬೆಂಗಳೂರು ಕೇಂದ್ರ – ಗುರುರಾಜ್ ಗಂಟಿಹೂಳಿ-ಉಸ್ತುವಾರಿ, ಗೌತಮ್ ಕುಮಾರ್ ಜೈನ್-ಸಂಚಾಲಕರು
28.ಬೆಂಗಳೂರು ಉತ್ತರ – ಎಸ್. ಆರ್. ವಿಶ್ವನಾಥ್-ಉಸ್ತುವಾರಿ, ಸಚ್ಚಿದಾನಂದ ಮೂರ್ತಿ-ಸಂಚಾಲಕರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button