Kannada NewsLatestNationalPolitics

*ಲೋಕಸಭಾ ಚುನಾವಣೆ: ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆಯಿಂದ ಮತದಾನಕ್ಕೆ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ. ಮುಕ್ತ, ನ್ಯಾಯಸಮ್ಮತ ಪಾರದರ್ಶಕ ಮತದಾನ ನಮ್ಮ ಉದ್ದೇಶ. ದೇಶದಲ್ಲಿ 97 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ದೇಶದಲ್ಲಿ 10.5 ಲಕ್ಷ ಮತದಾನ ಕೇಂದ್ರ ಇರಲಿದ್ದು, ಒಂದುವರೆ ಕೋಟಿ ಸಿಬ್ಬಂದಿಯನ್ನು ಚುನವಣೆಗೆ ಬಳಕೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.

ದೆಹಲಿಯ ವಿಜ್ಞನಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್, 17ನೇ ಲೋಕಸಭೆ ಅವಧಿ 2024ರ ಜೂನ್ 16ಕ್ಕೆ ಮುಕ್ತಾಯವಾಗಲಿದೆ ಎಂದರು.

ಎಲ್ಲಾ ಮತದಾನದ ಕೇಂದ್ರಗಳಲ್ಲಿ ನೀರು, ಶೌಚಾಲಯ, ಹೆಲ್ಫ್ ಡೆಸ್ಕ್ , ವಿದ್ಯುತ್, ವ್ಹೀಲ್ ಚೇರ್ ವ್ಯವಸ್ಥೆಗಳನ್ನು ಮಾಡಲಾಗುವುದು. 85 ವರ್ಷ ಮೇಲ್ಪಟ್ಟವರಿಗೆ, ಶೇ.40ರಷ್ಟು ದಿವ್ಯಾಂಗರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು.

ಮತದಾನ ಕೇಂದ್ರಗಳಲ್ಲಿ ವ್ಹೀಲ್ ಚೇರ್ ವ್ಯವಸ್ಥೆ ಇರಲಿದ್ದು, ಸ್ವಯಂಸೇವಕರೂ ಇರಲಿದ್ದಾರೆ. ಈ ಬಾರಿ 1.8 ಕೋಟಿ ಜನ ಮೊದಲ ಬಾರಿ ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.

Related Articles

Back to top button