
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ ಬಣದಿಂದ) ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೊರಬ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಘಟಕವನ್ನು ಜಿಲ್ಲಾಧ್ಯಕ್ಷರಾದ ಆರ್ ಅಭಿಲಾಷ್ ಉದ್ಘಾಟಿಸಿದರು.
ಮೊದಲು ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ತಾಯಿ ಭುವನೇಶ್ವರಿ ಫೋಟೋ ಪೂಜೆ ಮಾಡುವ ಮೂಲಕ ಕರವೇ ಗ್ರಾಮ ಘಟಕವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅಭಿಲಾಷ್ ಅವರು ಕನ್ನಡವನ್ನು ಹೆಚೆಚ್ಚು ಬಳಸಿ ಹಾಗೂ ಎಲೆಲ್ಲೂ ಕನ್ನಡತನವನ್ನು ಕಟ್ಟುವ ಕೆಲಸ ಮಾಡಬೇಕೆಂದು ಕರೆ ಕೊಟ್ಟರು.
ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿವಾಕರ್, ಗ್ರಾಮ ಪಂಚಾಯತ್ ಸದಸ್ಯರಾದ ನದಾಫ್, ಕರವೇ ತಾಲೂಕಾಧ್ಯಕ್ಷರಾದ ರಾಕೇಶ್, ಕರವೇ ಮೊರಬ ಗ್ರಾಮಧ್ಯಕ್ಷರಾದ ಚೇತನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.