Belagavi NewsBelgaum NewsElection News

*ಲೋಕಸಭಾ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬಕ್ಕೆ ಸಜ್ಜಾದ ಮತಗಟ್ಟೆಗಳು*

ಕಡ್ಡಾಯ ಮತದಾನ ಮಾಡಿ: ರಾಹುಲ್ ಶಿಂಧೆ


ಪ್ರಗತಿವಾಹಿನಿ ಸುದ್ದಿ: ಮೇ -೦೭ ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳು ಸಜ್ದಾಗಿದ್ದು ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲ ಮತದಾರರು ಭಾಗಿಯಾಗಿ ಕಡ್ಡಾಯ ಮತದಾನ ಮಾಡುವ ಮೂಲಕ ನಿಮ್ಮ ಸಂವಿಧಾನಿಕ ಹಕ್ಕನ್ನು ಚಲಾಯಿಸಬೇಕೆಂದು ಚಿಕ್ಕೊಡಿ ಲೋಕಸಬಾ ಮತಕ್ಷೆತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಹುಲ್ ಶಿಂಧೆ ಎಲ್ಲ ಮತದಾರರಿಗೆ ಕರೆ ನೀಡಿದ್ದಾರೆ.

ಸಖಿ ಅಥವಾ ಪಿಂಕ್ ಮತಗಟ್ಟೆ ನಿರ್ಮಾಣ, ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಆಯ್ಕೆ ಮಾಡಿ ಪಿಂಕ್ ಮತಗಟ್ಟೆಯನ್ನಾಗಿ ಪರಿವರ್ತಿಸಲಾಗುವುದು. ಮಹಿಳೆಯರಿಗೆ ಅನುಕೂಲವಾಗುವಂತೆ ಪ್ರತಿ ಮತಕ್ಷೇತ್ರವಾರು ಐದರಂತೆ ಜಿಲ್ಲೆಯಾದ್ಯಂತ ಒಟ್ಟು ತೊಂಬತ್ತು ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಈ ಮತಗಟ್ಟೆಗಳಲ್ಲಿ ಮತದಾನದ ಅನುಕೂಲಕ್ಕಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿರುತ್ತದೆ.

ಅದರಂತೆ ವಿಶೇಷ ಚೇತನರ ನಿರ್ವಹಣೆಗಾಗಿ ಜಿಲ್ಲೆಯಾದ್ಯಂತ ಒಟ್ಟು ಹದಿನೆಂಟು ಮತಗಟ್ಟೆಗಳು ಸಿದ್ಧಗೊಂಡಿದ್ದು, ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಸಹಾಯಕರ ನೆರವು, ರ್ಯಾಂಪ್, ವ್ಹೀಲ್ ಚೇರ್, ವಾಹನದ ಸೌಲಭ್ಯ ಹಾಗೂ ವಿಶೇಷ ಚೇತನ ಸ್ನೇಹಿ ಶೌಚಾಲಯ, ಸಂಕೇತ ಫಲಕಗಳು ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕು ಅಧಿಕ ಯುವ ಮತದಾರರು ನೊಂದಣಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಮತದಾರರಿರುವ ಮತಗಟ್ಟೆಗಳಲ್ಲಿ ಯುವಕರಿಗಾಗಿ ಯುವಜನ ನಿರ್ವಹಣೆಯ ಮತಗಟ್ಟೆಗಳನ್ನು ಜಿಲ್ಲೆಯಾದ್ಯಂತ ಹದಿನೆಂಟು ಯುವ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಮೊದಲಬಾರಿಗೆ ಮತದಾನ ಮಾಡುವ ಯುವಕರನ್ನು ಪ್ರೋತ್ಸಾಹಿಸಲು ಈ ಮತಗಟ್ಟೆ ನಿರ್ಮಾಣ ಮಾಡಲಾಗಿದೆ. ಆಯಾ ಮತಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ಸಾಧನೆ ಮಾಡಿದ ವ್ಯಕ್ತಿ, ಸ್ಥಳಿಯ ಜನಪದ ಕಲೆ, ಪ್ರೇಕ್ಷಣಿಯ ಸ್ಥಳ ಧ್ಯೇಯಗಳನ್ನು ಇಟ್ಟುಕೊಂಡು ಮತದಾರರಿಗೆ ಆಕರ್ಷಣಿಯವಾಗಿ ಕಾಣಲು ಹದಿನೆಂಟು ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ೪೫೨೪ ಮತಗಟ್ಟೆಗಳಲ್ಲಿ ಕೂಡ ವೈದ್ಯಕೀಯ ಕಿಟ್, ನೀರಿಕ್ಷಣಾ ಕೊಠಡಿ, ಕುಡಿಯುವ ನೀರು, ಸಹಾಯವಾಣಿ ಕೇಂದ್ರ, ನೆರಳಿಗಾಗಿ ಶಾಮಿಯಾನ ಶೌಚಾಲಯ ಹಾಗೂ ಹಿರಿಯ ನಗಾರಿಕರು, ದುರ್ಬಲ ಮತದಾರರು ಮತ್ತು ವಿಶೇಷ ಚೆತನ ಮತದಾರರಿಗೆ ಅನುಕೂಲವಾಗುವಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಮೇ ೭ ರಂದು ಎಲ್ಲ ಮತದಾರರು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಬೇಕಾಗಿ ಚಿಕ್ಕೊಡಿ ಲೋಕಸಬಾ ಮತಕ್ಷೆತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ರಾಹುಲ್ ಶಿಂಧೆ ತಿಳಿಸಿದ್ದಾರೆ.

Related Articles

Back to top button