
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಹಾಗೂ ಕಾಲೇಜಿನ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ 20 ಕ್ಕೂ ಅಧಿಕ ಲೋಕಾಯುಕ್ತ ಅಧಿಕಾರಿಗಳಿಂದ ಬೀಮ್ಸ್ ನಿರ್ದೇಶಕ ಡಾ. ಅಶೋಕುಮಾರ್ ಶೆಟ್ಟಿ ಅವರ ಚೇಂಬರ್‌ನಲ್ಲಿ ದಾಖಲೆಗಳು ಪರಿಶೀಲನೆ ನಡೆಸಲಾಗಿದೆ.
ಔಷಧಿ ಖರೀದಿಯಲ್ಲಿ ಅವ್ಯವಹಾರ, ಕರ್ತವ್ಯ ಪಾಲನೆಯಲ್ಲಿ ವೈದ್ಯರ ಲೋಪ, ಬಾಣಂತಿಯರ ಸಾವಿನ ಮಾಹಿತಿ ಸೇರಿದಂತೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎನ್ನಾಲಾಗಿದೆ.
ಇನ್ನೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಬೀಮ್ಸ್ ನಿರ್ದೇಶಕ ಡಾ. ಆಶೋಕ ಪಟ್ಟಣಶೆಟ್ಟಿ ಮಾಹಿತಿ ಮಾಹಿತಿ ನೀಡಿದ್ದು, ಸರ್ಕಾರಿ ಇಲಾಖೆಗಳಿಗೆ ಅವರದೊಂದು ವಿಸಿಟ್ ಇರುತ್ತೆ., ಬಿಮ್ಸ್ ಗೆ ಕೂಡಾ ವಿಸಿಟ್ ಮಾಡಿದ್ದಾರೆ, ಆಸ್ಪತ್ರೆಯಲ್ಲಿನ ಹಣಕಾಸು ಇಲಾಖೆ, ಸೂಪರ್ ಸ್ಪೇಷಾಲಿಟಿ ಬಗ್ಗೆ, ಸಿಬ್ಬಂದಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜನರಲ್ ವಿಸಿಟ್ ಮಾಡಿ ಮಾಹಿತಿ ಪಡೆದು ಆಸ್ಪತ್ರೆಯ ನ್ಯೂನ್ಯತೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ