Belagavi NewsBelgaum NewsKannada NewsKarnataka NewsLatest

*ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ*

ಪ್ರಗತಿವಾಹಿನಿ ಸುದ್ದಿ: ನರೇಗಾ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಲಂಚ ಪಡೆಯುತ್ತಿದ್ದ ಖಾನಾಪೂರದ ಸಹಾಯಕ ಕಾರ್ಯಪಾಲಕ ಅಭಿಯಂತರನನ್ನು ಬಂಧಿಸಲಾಗಿದೆ.

ದುರದುಂಡೇಶ್ವರ ಮಹಾದೇವ ಬನ್ನೂರ ಬಂಧಿತ ಇಂಜಿನಿಯರ್. ನೀಲಾವಡೆ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿಗೆ ಅನುಮೋದನೆ ನೀಡಲು ಲಂಚ ಪಡೆದಿದ್ದ ಆರೋಪ ಕೇಳಿಬಂದಿತ್ತು.

ನೀಲಾವಡೆ ಗ್ರಾಮ ಪಂಚಾಯತಿಯ 2ನೇ ವಾರ್ಡನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಮಂಜೂರಾತಿ ಪಡೆಯುವ ಕುರಿತು ನೀಲಾವಡೆ ಗ್ರಾಮ ಪಂಚಾಯತಿಯಿಂದ ಪಂಚಾಯತ ರಾಜ್ ಇಂಜೀನಿಯರಿಂಗ ಉಪವಿಭಾಗ, ಖಾನಾಪೂರ ಕಛೇರಿಗೆ ಆನಲೈನ್ ಮುಖಾಂತರ ಕಳುಹಿಸಲಾಗಿತ್ತು. ಸದರಿ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ನೀಡಲು ಸಹಾಯಕ ಕಾರ್ಯಪಾಲಕ ಅಭಿಯಂತರ ದುರದುಂಡೇಶ್ವರ ಮಹಾದೇವ ಬನ್ನೂರ ಇವರು ವಿನಾಯಕ ಮಲ್ಲಪ್ಪ ಮುತಗೇಕರ ರವರಿಗೆ ರೂ 10,000/- ಲಂಚದ ಹಣಕ್ಕೆ ಬೇಡಿಕೆ ಇಟ್ತಿದ್ದರು. ಈ ಹಿನ್ನೆಲೆಯಲ್ಲಿ ವಿನಾಯಕ ಮಲ್ಲಪ್ಪ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರದುಂಡೇಶ್ವರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.

Home add -Advt

ಬೆಳಗಾವಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನಮಂತರಾಯ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಭರತ ರಡ್ಡಿ, ಇನ್ಸ್ ಪೆಕ್ಟರ್ ರವಿಕುಮಾರ ಧರ್ಮಟ್ಟಿ, ಉಸ್ಮಾನ ಅವಟಿ, ಮತ್ತು ಸಿಬ್ಬಂದಿಗಳಾದ ವಿಠಲ ಬಸಕ್ರಿ ಸಿಎಚ್‌ಸಿ, ಸಂತೋಷ ಬೇಡಗ ಸಿಪಿಸಿ, ಗಿರೀಶ ಪಾಟೀಲ ಸಿಪಿಸಿ, ಲಗಮಣ್ಣಾ ಹೊಸಮನಿ ಸಿಪಿಸಿ, ಬಸವರಾಜ ಹುದ್ದಾರ ಸಿಪಿಸಿ, ಬಸವರಾಜ ಕೊಡೊಳ್ಳಿ ಕಾರ್ಯಾಚರಣೆಯಲಿ ಭಾಗಿಯಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button