ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕಿತ್ತೂರು ತಹಸಿಲ್ದಾರ ಸೋಮಲಿಂಗಪ್ಪ ಹಲಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಹಶೀಲ್ದಾರ ಸೋಮಲಿಂಗಪ್ಪ ಹಲಗಿ ಮತ್ತು ಕೇಸ್ ವರ್ಕರ್ ಪ್ರಸನ್ನ ಜಿ. ಲೋಕಾಯುಕ್ತ ಬಲೆಗೆ ಬಿದ್ದವರು.
ಜಮೀನಿನ ಖಾತೆ ಬದಲಾವಣೆ ಮಾಡಲು 2 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಿತ್ತೂರು ತಹಶೀಲ್ದಾರ್ ಮತ್ತು ತಹಶೀಲ್ದಾರ ಕಚೇರಿಯ ಕೇಸ್ ವರ್ಕರ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು.
ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದ ಬಾಪುಸಾಹೇಬ ಇನಾಂದಾರ್ ಎಂಬುವವರು ತಮ್ಮ 10 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರ್ 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. 2 ಲಕ್ಷ ರೂ. ಸ್ವೀಕರಿಸುವಾಗ ದಾಳಿ ಮಾಡಲಾಗಿದೆ.
ಬಾಪುಸಾಹೇಬ ಅವರ ಪುತ್ರ ರಾಜೇಂದ್ರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ವೋಟರ್ ಐಡಿ ಅಕ್ರಮ; 3 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಸಸ್ಪೆಂಡ್
https://pragati.taskdun.com/voter-id-scamtwo-officers-suspended3-vidhanasabha/
https://pragati.taskdun.com/appointment-of-chairman-for-border-river-protection-commission-order-by-state-government/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ