Kannada NewsKarnataka News

*ಲೋಕಾಯುಕ್ತ ಹೆಸರಲ್ಲಿ PWD ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್; ಬೆಳಗಾವಿ ಮೂಲದ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಸಂತೋಷ್ ಕೊಪ್ಪದ್ ಬೆಳಗಾವಿ ಮೂಲದವನು ಎಂದು ತಿಳಿದುಬಂದಿದೆ. ಈತನೊಂದಿಗೆ ಇದ್ದ ಇನ್ನೋರ್ವ ನಕಲಿ ಅಧಿಕರಿ ಬೈಲಹೊಂಗಲದ ದೇಶನೂರು ನಿವಾಸಿ ವಿಕಾಶ್ ಪಾಟೀಲ್ ಎಸ್ಕೇಪ್ ಆಗಿದ್ದಾನೆ.

ಈ ಇಬ್ಬರು ತಾವು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ನಕಲಿ ಗುರುತು ತೋರಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಧಿಕಾರಿಗಳ ದೂರಿನ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಹಣ ಪಡೆಯಲು ಬಂದ ಆರೋಪಿ ಸಂತೋಷ್ ನನ್ನು ಬಂಧಿಸಲಾಗಿದೆ.

ಈತನ ಜೊತೆಗಿದ್ದ ಇನ್ನೋರ್ವ್ ಆರೋಪಿ ವಿಕಾಸ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

Home add -Advt


Related Articles

Back to top button