Latest

ಹಿರಿಯ ನಟ ಶಂಖನಾದ ಅರವಿಂದ್ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ಹಿರ ನಟ, ಶಂಖನಾದ ಅರವಿಂದ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 10 ದಿನಗಳಿಂದ ಅರವಿಂದ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಉಸಿರಾಟದ ತೊಂದರೆ ತೀವ್ರಗೊಂಡು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಬೆಟ್ಟದ ಹೂವು ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಶಂಖನಾದ ಅರವಿಂದ್, 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಹಿರಿಯ ನಟನ ಅಗಲಿಕೆಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಅರವಿಂದ್ ಅವರ ಪತ್ನಿ ಗಾಯಕಿ ರಮಾ ಅರವಿಂದ್ ಕೂಡ ಜನವರಿಯಲ್ಲಿ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದರು.

ಖಾಸಗಿ ಲ್ಯಾಬ್ ಗಳ ವಸೂಲಿಗೆ ಕಡಿವಾಣ; ಸಿಟಿ ಸ್ಕ್ಯಾನ್ ಗೆ ದರ ನಿಗದಿ

Home add -Advt

Related Articles

Back to top button